ಸಿಎಂ  ನೇತೃತ್ವದಲ್ಲಿ  ಜನಪ್ರತಿನಿಧಿಗಳ ಸಭೆ :  ೨೧ಕ್ಕೆ

ಕೊಪ್ಪಳ-  ತುಂಗಭದ್ರಾ ಜಲಾಶಯದ ನಾಲೆಗೆ ನೀರು ಬಿಡುವದಕ್ಕಾಗಿ ನಿರ್ಧರಿಸಲು ಸಭೆ ನಿಗದಿ..ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ  ಜನಪ್ರತಿನಿಧಿಗಳ ಸಭೆ ಸಮಯ ನಿಗದಿ..ಆಗಷ್ಟ ೨೧ ಮುಂಜಾನೆ ೧೦.೩೦ ಕ್ಕೆ ಬೆಂಗಳೂರಿನ ಗೃಹ ಕಚೇರಿಯಲ್ಲಿ ಸಭೆ. ಕೊಪ್ಪಳ, ರಾಯಚೂರು ಹಾಗು ಬಳ್ಳಾರಿ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದ ಸಿಎಂ. ಜಲಾಶಯದಿಂದ ನಾಲೆಗೆ ನೀರು ಬಿಡಲು ವಿಳಂಭ ಹಿನ್ನಲೆ ‌ಗಂಗಾವತಿಯಲ್ಲಿ ಪ್ರತಿಭಟನೆ ನಡೆದಿತ್ತು ಪ್ರತಿಭಟನೆಗೆ ಮಣಿದು ಸಭೆ ಕರೆದ ಸಿಎಂ.ಕಳೆದ ಆ ೧೩ ರಂದು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಸಂತೋಷ ಲಾಡ್  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಾಲೆ ನೀರು ಬಿಡಲು ಆಗುವುದಿಲ್ಲ ಎಂಬ ನಿರ್ಣಯ ಮಾಡಿದ್ದರು. ಪ್ರಥಮ ಬಾರಿಗೆ ನೀರು ಬಿಡುವ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ಸಭೆ.ಸಿಎಂ ಸಭೆಯ ನಿರ್ಣಯಕ್ಕಾಗಿ ಕಾದು ಕುಳಿತ ರೈತರು..

Read More