​ಎನ್. ಪದ್ಮವರ್ದನ್ ; ಹೋರಾಟದ ಕೆಚ್ಚಿನ ಸೀನಿಯರ್ ಇನ್ನಿಲ್ಲ

Raichur : ಎನ್.ಪದ್ಮವರ್ದನ್, ವಕೀಲರು, ಸಂಘಟನೆಗಳ ಒಡನಾಡಿ, ಪ್ರಗತಿಪರ ಚಿಂತಕ ನಮ್ಮನ್ನಗಲಿದ್ದಾರೆ.  ನಿನ್ನೆ‌ ರಾತ್ರಿ  10.30  ರ‌ ಸುಮಾರಿಗೆ ಹೃದಯಾಘಾತ ಸಂಭವಿಸಿದೆ. ಕಳೆದ 20  ವರ್ಷಗಳ ಒಡನಾಟವಿದ್ದ ನನ್ನಂತಹ ಎಷ್ಟೋ ಜನ ಸಾಮಾಜಿಕ ಕಾರ್ಯಕರ್ತರುಗಳು ಇವರ ಸಾವನ್ನು ಅರಗಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ತಂದೆಯ  ಕೊನೆ ಉಸಿರು ಎಳೆಯುವಾಗ ಎದುರಿಗಿದ್ದ ಮಗಳು ಮೇಘನಾಳ ಬಿಕ್ಕಳಿಕೆಯ ಅಳು,  ಪತ್ನಿ ಪದ್ಮಾ ಮೇಡಂರ ದುಃಖದ ಆರ್ತನಾದ, ಅಪ್ಪನ ಮಾತು ಮೀರದ ಕೌಸಲ್ಯಳ ಮೌನದ ಅಳು‌, ಇವರನ್ನಲ್ಲದೆ ನಮ್ಮೆಲ್ಲರನ್ನೂ ಕಾಡುತ್ತಿದೆ ಅನಾಥತೆ…… ಜನರ ಪರವಾದ ವಕೀಲರೆಂದರೆ ಪದ್ಮವರ್ದನ್. ಬಡವರು ಇವರ ಬಳಿ ಹೋದರೆ 10ರೂ ಕೊಡದೆ ಕೇಸು ಕೊಡಬಹುದಿತ್ತು…ಕೇಸು ನಡೆಸಬಹುದಿತ್ತು. ಸಾಮಾಜಿಕ ಹೋರಾಟಗಾರರು, ದಲಿತ‌ ಚಳವಳಿ, ಶೋಷಿತ ಸಮುದಾಯಗಳ ಪರವಾಗಿ ಯಾರಾದರೂ ಧ್ವನಿ‌ ಎತ್ತಿದರೆ ಅವರ ಪರವಾಗಿ ನಿಲ್ಲದೇ ಇರುತ್ತಿರಲಿಲ್ಲ ಪದ್ಮವರ್ಧನ್. ಇವರು ಸೀನಿಯರ್  ಅಡ್ವೊಕೇಟ್ ಆಗಿದ್ದರೂ ಬರೀ ಕೋರ್ಟ್ ನಲ್ಲಿ ನ್ಯಾಯ ಸಿಗುವುದಿಲ್ಲ,…

Read More