ರಾಮನಗರ: ಸುರಕ್ಷಿತ ಅಂತರ ನಿಯಮ ಉಲ್ಲಂಘಿಸಿ ಜಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಮಂದಿ

ರಾಮನಗರ, ಮೇ 15: ಬೆಂಗಳೂರು ಹೊರವಲಯದ ರಾಮನಗರ ಜಿಲ್ಲೆಯ ಕೊಲಗೊಂಡನಹಳ್ಳಿಯಲ್ಲಿ ಸಾವಿರಾರು ಗ್ರಾಮಸ್ಥರು ಸುರಕ್ಷಿತ ಅಂತರ ನಿಯಮವನ್ನು ಮರೆತು ಊರಿನ ಮಾರಿಯಮ್ಮ ಜಾತ್ರೆಯಲ್ಲಿ ಪಾಲ್ಗೊಂಡಿರುವ ಘಟನೆ ವರದಿಯಾಗಿದೆ. ಧಾರ್ಮಿಕ ಕಾರ್ಯಕ್ರಮಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎನ್‌ಸಿ ಕಲಮಠ ಅನುಮತಿ ನೀಡಿದ್ದರು. ತಹಶೀಲ್ದಾರರ ವರದಿಯ ಬಳಿಕ ರಾಮನಗರ ಉಪ ಆಯುಕ್ತರು ಎನ್‌ಸಿ ಕಲಮಠರನ್ನು ಅಮಾನತುಗೊಳಿಸಿದ್ದಾರೆ. ಸರಕಾರದ ಡಾಟಾ ಪ್ರಕಾರ ರಾಮನಗರ ಇದೀಗ ಗ್ರೀನ್ ವಲಯದಲ್ಲಿದೆ. ಗ್ರಾಮದ ಮಾರಮ್ಮ ಜಾತ್ರೆಯಲ್ಲಿ ಸಾವಿರಾರು ಜನರು ಗುಂಪಾಗಿ ಸೇರಿದ್ದರು. ಈ ವೇಳೆ ಸುರಕ್ಷಿತ ಅಂತರ ನಿಯಮವನ್ನು ಉಲ್ಲಂಘಿಸಿದ್ದರು. ಜಾತ್ರೆಯ ವೀಡಿಯೊದಲ್ಲಿ ಯಾರೂ ಕೂಡ ಮಾಸ್ಕ್ ಧರಿಸದಿರುವುದು ಕಂಡುಬಂದಿದೆ. ಗ್ರಾಮಸ್ಥರು ದೇವಿಗೆ ಹರಕೆಯನ್ನು ನೀಡಲು ವಸ್ತುಗಳನ್ನು ತಂದಿದ್ದರು. ಕೊರೋನ ವೈರಸ್‌ನಿಂದ ಎಲ್ಲರನ್ನು ರಕ್ಷಿಸುವಂತೆ ಜನರು ಮಾರಮ್ಮನಲ್ಲಿ ಬೇಡಿಕೊಂಡಿದ್ದಾರೆ. ಆದರೆ ಈ ವೇಳೆ ವೈರಸ್‌ನ್ನು ತಡೆಗಟ್ಟಲು ಅಗತ್ಯವಿರುವ ನಿಯಮವನ್ನು ಜನರು ಗಾಳಿಗೆ ತೂರಿದ್ದಾರೆ ಎಂದು ತಿಳಿದು…

Read More