ಯಾದಗಿರಿ ಸೋಂಕಿತರ ಸಂಖ್ಯೆ 929ಕ್ಕೆ ಏರಿಕೆ: ಮತ್ತೆ 13 ಜನರಿಗೆ ಕೊರೊನಾ ಪಾಸಿಟಿವ್

ಯಾದಗಿರಿ,: ಜಿಲ್ಲೆಯಲ್ಲಿ ಜೂನ್ 27ರಂದು ಶನಿವಾರ 2 ವರ್ಷದ ಗಂಡುಮಗು ಸೇರಿದಂತೆ ಒಟ್ಟು 13 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 929 ಪ್ರಕರಣಗಳ ಪೈಕಿ 785 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ್ ಜಿ.ರಜಪೂತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುರಪುರ ತಾಲ್ಲೂಕಿನ ಕೆಂಭಾವಿಯ 24 ವರ್ಷದ ಪುರುಷ (ಪಿ-11263), ಕೆಂಭಾವಿಯ 24 ವರ್ಷದ ಪುರುಷ (ಪಿ-11264), ಹುಣಸಗಿ ಬೈಲಗಿಡ್ಡ ತಾಂಡಾದ 32 ವರ್ಷದ ಪುರುಷ (ಪಿ-11265), ಗುರುಮಠಕಲ್ ತಾಲ್ಲೂಕಿನ ಕೊಂಕಲ್ ಗ್ರಾಮದ 20 ವರ್ಷದ ಮಹಿಳೆ (ಪಿ-11266), ಗುರುಮಠಕಲ್ ತಾಲ್ಲೂಕಿನ ಯಲಸತ್ತಿ ಗ್ರಾಮದ 27 ವರ್ಷದ ಪುರುಷ (ಪಿ-11267), ಯಲಸತ್ತಿ ಗ್ರಾಮದ 70 ವರ್ಷದ ಮಹಿಳೆ (ಪಿ-11268), ಯಾದಗಿರಿ ತಾಲ್ಲೂಕಿನ ಅಲ್ಲಿಪೂರ ದೊಡ್ಡ ತ‍ಂಡಾದ 5 ವರ್ಷದ ಹೆಣ್ಣಮಗು (ಪಿ-11269), ಯಾದಗಿರಿ ತಾಲ್ಲೂಕಿನ ಹತ್ತಿಕುಣಿ…

Read More