ಎಂಟಿಬಿ ಅಪರೇಷನ್ ಕಮಲಕ್ಕೆ ಯಡಿಯೂರಪ್ಪನವರಿಗೆ ಸಾಲ ಕೊಟ್ಟಿದ್ದಾರೆ- ಸಿದ್ದರಾಮಯ್ಯ

ಮೈಸೂರು , ನ . : ಆಪರೇಷನ್ ಕಮಲದಲ್ಲಿ ಎಂಟಿಬಿ ನಾಗರಾಜ್ ಹಣ ಪಡೆದಿಲ್ಲ . ಆದರೆ ಅವರು ಆಪರೇಷನ್ ಕಮಲಕ್ಕೆ ಯಡಿಯೂಪ್ಪನವರಿಗೆ ಸಾಲ ಕೊಟ್ಟಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು .  ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆಪರೇಷನ್ ವೇಳೆ ಅನರ್ಹರಿಗೆ ಹಣ ನೀಡಲು ಎಂಟಿಬಿ ಒಬ್ಬರೇ ಸಾಲಕೊಟ್ಟಿದ್ದಾರೆ . ಅವರು ಒಬ್ಬರು ಹಣ ಪಡೆಯದವರು . ಈ ಕಾರಣದಿಂದಾಗಿ ಎಂಟಿಬಿ ನಾಗರಾಜ್ ಮೇಲೆ ಯಡಿಯೂರಪ್ಪನವರು ಅತಿಯಾದ ಪ್ರೀತಿ ತೋರಿಸುತ್ತಿದ್ದಾರೆ . ಎಂಟಿಬಿ ನಾಗರಾಜ್ ಗೆಲುವೇ ನನ್ನ ಗೆಲುವು ಎಂದು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ನುಡಿದರು . ಎಂಟಿಬಿ ನಾಗರಾಜ್ ಅವರಿಂದ ನಾನು ಸಾಲ ಪಡೆದಿಲ್ಲ . ಸಾಲವನ್ನು ಪಡೆಯದೆ ನಾನು ಏನನ್ನು ವಾಪಸ್ ನೀಡಲಿ . ಕೃಷ್ಣಬೈರೆಗೌಡರು ಪಡೆದಿದ್ದ ಸಾಲವನ್ನು ವಾಪಸ್ ಕೊಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದರು . ಹಣದಾಸೆಗಾಗಿ ಅನರ್ಹ ಶಾಸಕರು ಬಿಜೆಪಿ ಸೇರಿದ್ದಾರೆಂದು…

Read More