You are here
Home > ಕರ್ನಾಟಕ > ಮೈಸೂರು

ಮೈಸೂರು ಒಕ್ಕೂಟದ ಬಳಗದವರ ‘ಚುನಾವಣೆ: ಒಳ ಹೊರಗೆ’

ಇಡಿಯ ಭಾರತದ, ಅಷ್ಟೇ ಅಲ್ಲ, ವಿಶ್ವದ ಗಮನವನ್ನೇ ಸೆಳೆದ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿದಿದೆ. ಮತ್ತೊಂದು ಚುನಾವಣೆ ಬರಲಿದೆ. ಜನಮತ ಪ್ರಜಾತಂತ್ರದ ಜೀವಾಳ, ನಿಜ. ಆದರೆ ದಿನದಿಂದ ದಿನಕ್ಕೆ ಚುನಾವಣಾ ರಾಜಕೀಯವೇಕೆ ಪ್ರಜಾಪ್ರಭುತ್ವ ಆಶಯಗಳಿಂದ ದೂರ ಸಾಗುತ್ತಿದೆ? ಏಕೆ ಮಹಿಳೆಯರನ್ನು ನಿರ್ಲಕ್ಷಿಸಲಾಗುತ್ತಿದೆ? ಮಹಿಳಾ ಪ್ರಾತಿನಿಧ್ಯವು ಸದನದಲ್ಲಿ ಹಾಗೂ ಮಂತ್ರಿಮಂಡಲದಲ್ಲಿ ಕ್ಷೀಣವಾಗಿರಲು ಕಾರಣಗಳೇನು? ಮಹಿಳೆಯರೇಕೆ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದಾರೆ? ಸೂಕ್ತ ಮಹಿಳಾ ಪ್ರಾತಿನಿಧ್ಯ ದೊರಕಿದಲ್ಲಿ ಪ್ರಜಾಪ್ರಭುತ್ವದ ಆಶಯಗಳು ಜೀವಂತವಾಗುಳಿಯಬಲ್ಲವೆ? ಹಣ-ಜಾತಿ-ಕುಟುಂಬ

Top