ಈ ಬೀದಿಗಳಲ್ಲೆವೂ ನಮ್ಮವು ಹಗಲು ಮತ್ತು ಇರುಳು’- ಖ್ಯಾತ ಸ್ತ್ರೀವಾದಿ ಚಿಂತಕಿ ವೋಲ್ಗಾ

Mandya ಮಹಿಳೆಯರು ಇಂಥ ಬಟ್ಟೆಗಳನ್ನು ಹಾಕಿಕೊಳ್ಳಬಾರದು, ರಾತ್ರಿವೇಳೆ ಹೆಣ್ಣು ಮಕ್ಕಳು ಹೊರಗೆ ಬರಬಾರದು ಎನ್ನುವ ವಾದಕ್ಕೆ ನಮ್ಮದು ಪ್ರತಿವಾದ ಇದೆ. ಅದೆಂದರೆ ರಾತ್ರಿವೇಳೆ ಪುರುಷರನ್ನೇ ಮನೆಯಲ್ಲಿ ಕೂಡಿಹಾಕಿ ರಾತ್ರಿಗಳನ್ನು, ಬೀದಿಗಳನ್ನು ನಾವು ವಶಪಡಿಸಿಕೊಳ್ಳಬೇಕು. ಏಕೆಂದರೆ ‘ಈ ಬೀದಿಗಳಲ್ಲೆವೂ ನಮ್ಮವು ಹಗಲು ಮತ್ತು ಇರುಳು’ ಎಂದು ಖ್ಯಾತ ಸ್ತ್ರೀವಾದಿ ಚಿಂತಕಿ ವೋಲ್ಗಾರವರು ಪ್ರತಿಪಾದಿಸಿದ್ದಾರೆ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ವತಿಯಿಂದ ಮಂಡ್ಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿಕ್ಸೂಚಿ ಭಾಷಣದಲ್ಲಿ ಅವರು ಮಾತನಾಡಿದರು. ಹೈದರಾಬಾದ್ ನ ಪ್ರಖ್ಯಾತ ಸ್ತ್ರೀವಾದಿ ಚಿಂತಕಿ ಮತ್ತು ಹೋರಾಟಗಾರ್ತಿಯಾದ ಅವರು, ‘ಮಹಿಳಾ ಬದುಕಿನ ಪಲ್ಲಟಗಳು’ ವಿಷಯದ ಕುರಿತು ಮಾತನಾಡಿ, ಈ ಶೀರ್ಷಿಕೆ ನಾವು ಬದುಕಿತ್ತಿರುವ ಸನ್ನಿವೇಶದಲ್ಲಿ ಅತ್ಯಂತ ಅಗತ್ಯದ ವಿಷಯವಾಗಿದೆ. ಮಹಿಳೆಯರು ಹೋರಾಟದಲ್ಲಿ ಚಾರಿತ್ರಿಕ ಏಳುಬೀಳುಗಳನ್ನು ಅನುಭವಿಸಿದ್ದಾರೆ. ಆದರೆ ಅದು ನಿರಂತರವಾಗಿ…

Read More