ದೇಶದ ಮೊದಲ ಪತ್ರಕರ್ತ ಮಹಾತ್ಮ ಗಾಂಧೀಜಿ: ಗೋವಿಂದ ಕಾರಜೋಳ

ಮಂಗಳೂರು : ಸ್ವಾತಂತ್ರ್ಯ ಸಂಗ್ರಾಮ ಆರಂಭಿಸುವ ವೇಳೆ ಬ್ರಿಟಿಷರ ದಬ್ಬಾಳಿಕೆಯನ್ನು ಜನರಿಗೆ ಮನವರಿಕೆ ಮಾಡುವಲ್ಲಿ ಯಂಗ್ ಇಂಡಿಯಾ ಪತ್ರಿಕೆಯನ್ನು ಹುಟ್ಟು ಹಾಕಿ ಪ್ರಾದೇಶಿಕ ಭಾಷೆಗಳಲ್ಲಿ ಆರಂಭಿಸಿದವರು ಮಹಾತ್ಮ ಗಾಂಧಿ. ಹಾಗಾಗಿ ಅವರು ಈ ದೇಶದ ಮೊದಲ ಪತ್ರಕರ್ತ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಪ್ರಾಯಿಸಿದರು. ರಾಜ್ಯಮಟ್ಟದ ಪತ್ರಕರ್ತರ 35ನೆ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು. ಮಹಾತ್ಮ ಗಾಂಧಿ ಹೆಸರಲ್ಲಿಯೂ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಬೇಕು ಎಂದು ಹೇಳಿದರು. ರಾಜ್ಯದ ಪತ್ರಕರ್ತರ ಸಂಘವು ಕ್ಷೇಮಾಭಿವೃದ್ಧಿ ನಿಧಿಗೆ 50 ಕೋಟಿ ರೂ.ಗಳ ಬೇಡಿಕೆ ನೀಡಿತ್ತು. ಈ ವರ್ಷ 5 ಕೋಟಿ ರೂ. ನೀಡಲಾಗಿದೆ.  ಅದನ್ನು ಮುಂದಿನ ದಿನ ಹೆಚ್ಚಿಸಲು ಮುಖ್ಯಮಂತ್ರಿ ಜತೆ ಮಾತನಾಡಲಾಗುವುದು. ಬೆಂಗಳೂರು ಪತ್ರಕರ್ತರ ಭವನಕ್ಕೆ 5 ಕೋಟಿ ರೂ. ಒದಗಿಸಲು ಪ್ರಯತ್ನ ಹಾಗೂ ಜಿಲ್ಲೆಯ ಪತ್ರಕರ್ತರ ಭವನಕ್ಕೆ ನೀಡಲಾಗುವ  25 ಲಕ್ಷ ರೂ.ಗಳನ್ನು ಹೆಚ್ಚಿಸಲು…

Read More