ರಾಜ್ಯದ ಹಲವಾರು ಕಡೆ ಇಂದು ಬೀಕರ ಅಪಘಾತಗಳು

ಇಂದು ರಾಜ್ಯದ ವಿವಿದೆಡೆ ಸಂಭವಿಸಿದ ಬೀಕರ ಅಪಘಾತಗಳಲ್ಲಿ ಹತ್ತಾರು ಜನ ಸಾವನ್ನಪ್ಪಿದ್ದಾರೆ. ಭಾಗಲಕೋಟೆ ;: ಟಂಟಂ ಮತ್ತು ಶಿಫ್ಟ್ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿ ಇಬ್ಬರು ದುರ್ಮರಣಕ್ಕೀಡಾದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿ ಬೈಪಾಸ್ ಬಳಿ ನಡೆದಿದೆ. ಬೈಪಾಸ್ ಬಳಿ ವೇಗವಾಗಿ ಚಲುಸುತ್ತಿದ್ದಾಗ ಎದುರಿಗೆ ಬಂದ ಟಂಟಂಗೆ ಶಿಫ್ಟ್ ಕಾರ್ ಡಿಕ್ಕಿ ಹೊಡೆದಿದೆ. ಈ ವೇಳೆ ಟಂಟಂ ನಲ್ಲಿದ್ದ ಇಬ್ಬರು ದುರ್ಮಣಕ್ಕೀಡಾಗಿದ್ದಾರೆ. ಮೃತರು ಬಾದಾಮಿ ತಾಲೂಕಿನ ಖ್ಯಾಡ ಗ್ರಾಮದವರಾಗಿದ್ದು ಟಂಟಂ ಚಾಲಕ ೩೫ ವರ್ಷದ ಗಂಗಯ್ಯ ಬಿಕ್ಷಾವತಿಮಠ, ಮತ್ತು ೧೩ ವರ್ಷದ ರಮೇಶ ಸಂಕಿಣ್ಣವರ್ ಅಂತ ಗುರ್ತಿಸಲಾಗಿದೆ. ಟಂಟಂನಲ್ಲದ್ದ ಇಬ್ಬರು ಮೃತರು ಕೆರೂರ್ ಸಂತೆಗೆ ತೆರಳುತ್ತಿದ್ದರು ಅಂತ ತಿಂಳಿದುಬಂದಿದೆ. ಇನ್ನು ಶಿಫ್ಟ್ ಕಾರ್ ಚಾಲಕ ಕಾರು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಈ ಸಂಬಂಧ ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಬಳ್ಳಾರಿ…

Read More