ರಾಜ್ಯದಲ್ಲಿ ಒಂದೇ ದಿನ 143 ಮಂದಿಗೆ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 1,605ಕ್ಕೆ ಏರಿಕೆ

ಬೆಂಗಳೂರು, ಮೇ 21: ರಾಜ್ಯದಲ್ಲಿ ಮತ್ತೆ 143 ಮಂದಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದ ಸೋಂಕಿತರ ಒಟ್ಟು ಸಂಖ್ಯೆ 1,605ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಲೆಟಿನ್ ತಿಳಿಸಿದೆ. ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಬುಧವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆವರೆಗೆ 143ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಲಾಗಿದೆ. ಈ ಪೈಕಿ ಮಂಡ್ಯ 33, ಉಡುಪಿಯಲ್ಲಿ 27, ಹಾಸನದಲ್ಲಿ 13, ಬಳ್ಳಾರಿ 11, ಬೆಳಗಾವಿ 8, ಉತ್ತರ ಕನ್ನಡದಲ್ಲಿ 9, ಬೆಂಗಳೂರು ನಗರದಲ್ಲಿ 8, ದ.ಕ ಮತ್ತು ಶಿವಮೊಗ್ಗದಲ್ಲಿ ತಲಾ 6, ರಾಯಚೂರು 5, ಧಾರವಾಡ 5, ದಾವಣಗೆರೆ 3, ಗದಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ತಲಾ 2, ಮೈಸೂರು ಮತ್ತು ವಿಜಯಪುರದಲ್ಲಿ ತಲಾ 1 ಸೇರಿದಂತೆ ಒಟ್ಟು 143 ಮಂದಿಯಲ್ಲಿಂದು ಸೋಂಕು ಪತ್ತೆಯಾಗಿದೆ. ಈ…

Read More