ಜಮೀರ್ ಅಹ್ಮದ್ ಖಾನ ಜನ್ಮ ದಿನ ಆಚರಣೆ

ಕೊಪ್ಪಳ :  ಬೆಂಗಳೂರಿನ ಚಾಮರಾಜ ಪೇಟೆ ಶಾಸಕರಾದ ಬಿ.ಝಡ್ ಜಮೀರ್ ಅಹ್ಮದ್ ಖಾನ ರವರ 51ನೇ ಜನ್ಮ ದಿನಾಚರಣೆಯನ್ನು ಕೊಪ್ಪಳ ಜಿಲ್ಲಾ ಅಭಿಮಾನಿ ಬಳಗದ ವತಿಯಿಂದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ವಿತರಿಸಿ ಹಾಗೂ ಬಾಲಕರ ಬಾಲಮಂದಿರದಲ್ಲಿ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಜನ್ಮ ದಿನಾಚರಣೆಯನ್ನು ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಹಜರತ್‍ಅಲಿ ಶ್ರೀಶೈಲನಗರ, ಸಲೀಂ ಅಳವಂಡಿ, ಹುಸೇನ್ ಪಾಷಾ ಮಾನ್ವಿ, ಚಾಂದಪಾಷಾ, ವಿಜಯ ಕುಮಾರ ಜವಳಗೇರಿ, ದೌಲತ್ ಪಟೇಲ್, ಜಾವಿದ್ ಬಳಿಗಾರ, ಬಸವರಾಜ ಮಾಲಿಪಾಟೀಲ್, ಅಲ್ಲಾಭಕ್ಷಿ ತಿರ್ಲಾಪೂರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Read More