ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ನೀಡಿ-ಹೈದ್ರಾಬಾದ ಕರ್ನಾಟಕ ಮುಸ್ಲಿಂ ಪಾಲಿಟಿಕಲ್‌ ಫೋರಂ

  ಕೊಪ್ಪಳ : ಲೋಕಸಭಾ ಚುನಾವಣೆಯಲ್ಲಿ ಜಾತ್ಯಾತೀತ ಪಕ್ಷಗಳು ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಹೈದ್ರಾಬಾದ ಕರ್ನಾಟಕ ಮುಸ್ಲಿಂ ಪಾಲಿಟಿಕಲ್‌ ಫೋರಂ ಆಗ್ರಹಿಸಿದೆ. ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೋರಂನ ಪದಾಧಿಕಾರಿಗಳು ನಮ್ಮ ದೇಶದಲ್ಲಿ ಮುಸ್ಲಿಂರನ್ನು ಕಳೆದ 70 ವರ್ಷಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯವಸ್ಥಿತವಾಗಿ ತುಳಿಯುತ್ತ ಬರಲಾಗಿದೆ . ಸರಕಾರದ ಹಲವಾರು ವರದಿಗಳು ವಿಶೇಷವಾಗಿ ನ್ಯಾ . ಸಾಚಾರ ಸಮಿತಿ ಹಾಗೂ ನ್ಯಾ . ರಂಗನಾಥ ಮಿಶ್ರಾ ಆಯೋಗದ ವರದಿಗಳು ಇತ್ತೀಚಿನ ಉದಾಹರಣೆಗಳು . ಈ ವರದಿಗಳ ಪ್ರಕಾರ ಮುಸ್ಲಿಂರು ಕೇವಲ ಆರ್ಥಿಕ , ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಪಟ್ಟಿಯಲ್ಲಿವೆಯಲ್ಲದೇ ರಾಜಕೀಯ ಸ್ಥಾನಮಾನಗಳಲ್ಲಿ ಕೂಡ ದೂರ ತಳ್ಳಲ್ಪಟ್ಟಿವೆ . ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಸಮುದಾಯದ ಬೆಳವಣಿಗೆ , ಅಭಿವೃದ್ಧಿ ಆ ಸಮುದಾಯದ ರಾಜಕೀಯ ಪ್ರಾತಿನಿಧ್ಯ ನಿರ್ಧರಿಸುತ್ತದೆ ಎಂದು ಹೇಳಲಾಗಿದೆ . ದೇಶದ…

Read More