ಸೂಟ್ ಕೇಸ್ ವಿಚಾರ ಪಟ್ಟಭದ್ರರು ತಿರುಚಿದ್ದಾರೆ-ಡಾ.ಮಲ್ಲಿಕಾ ಎಸ್ ಘಂಟಿ

ಹಂಪಿ : ಹಂಪಿ ಕನ್ನಡ ವಿವಿ ಬೆಳ್ಳಿ ಹಬ್ಬದ ಸಡಗರದಲ್ಲಿದ್ದ ಕುಲಪತಿ ಮಲ್ಲಿಕಾ ಘಂಟಿ ತಮ್ಮ ಭಾಷಣದಲ್ಲಿ ಸೂಟ್ ಕೇಸ್ ರೂಪಕವಾಗಿ ಹೇಳಿದ್ದನ್ನೇ ತಿರುಚಿ ಪಟ್ಟಭದ್ರರು ಆತಂಕವನ್ನುಂಟು ಮಾಡಿದ್ದಾರೆ. ಹೀಗೆಂದು ಮಲ್ಲಿಕಾ ಘಂಟಿ ಅವರೇ ತುರ್ತು ಪತ್ರಿಕಾ ಪ್ರಕಟಣೆ ನೀಡಿ, ಮಾಧ್ಯಮಗಳು ತಿರುಚಿ ಸುದ್ದಿ ಮಾಡಿದ್ದು ಆತಂಕವನ್ನುಂಟು ಮಾಡಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ನಾನು ವಿಧಾನಸೌಧದ ಪದವನ್ನೇ ಬಳಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ ಮಲ್ಲಿಕಾ ಘಂಟಿ, ತಮ್ಮ ಭಾಷಣದಲ್ಲಿ ಹಿಂದೆ‌ ಚಂದ್ರಶೇಖರ್ ಕಂಬಾರ ಮಂತ್ರಿಗಳನ್ನು ಭೇಟಿ ಮಾಡಲು ಹೋದರೆ ಮಂತ್ರಿಗಳೇ ಕುಲಪತಿಗಳನ್ನು ಕಾಯುತ್ತಿದ್ದರು. ವಿವಿ ಅಭಿವೃದ್ಧಿಗೆ ಸೂಟ್ ಕೇಸ್ ತುಂಬಾ ದುಡ್ಡು ಕೊಟ್ಟು ಕಳುಹಿಸುತ್ತಿದ್ದರು. ಈಗ ಸೂಟ್ಕೇಸ್ ತುಂಬಾ ಕಡತಗಳನ್ನಿಟ್ಟುಕೊಂಡು ಮಂತ್ರಿಗಳಿಗಾಗಿ ಕಾಯಬೇಕು ಎಂದು ರೂಪಕವಾಗಿ ಹೇಳಿದ್ದನ್ನೇ ತಿರುಚಿ ಪಟ್ಟಭದ್ರರು, ಮಾಧ್ಯಮಗಳು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಸರ್ಕಾರದ ಬಗ್ಗೆ, ಸಿಎಂ ಬಗ್ಗೆ ನನಗೆ ಅತ್ಯಂತ ಗೌರವವಿದೆ.…

Read More