ಮೇ ಸಾಹಿತ್ಯ ಮೇಳ ಬನ್ನಿ …

2017 ಮೇ 6, 7 ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ಅಂತರ್ರಾಷ್ಟ್ರೀಯ ಖ್ಯಾತ ಲೇಖಕಿ ಗೀತಾ ಹರಿಹರನ್ ಉದ್ಘಾಟಿಸುವರು. ಆಲೂರು ವೆಂಕಟರಾವ್ ಸಭಾಭವನ ಧಾರವಾಡ. ಮೇ 6, 7 ರಂದು ಧಾರವಾಡದ ಆಲೂರು ವೆಂಕಟರಾವ್ ಭವನದಲ್ಲಿ ನಡೆವ ಮೇ ಸಾಹಿತ್ಯ ಮೇಳದಲ್ಲಿ ಹೊರ ರಾಜ್ಯಗಳಿಂದ ಭಾಗವಹಿಸುವ ಅತಿಥಿಗಳು ಯಾರು? ಅವರೇನು? ಚಿಕ್ಕ ಮಾಹಿತಿ ಇಲ್ಲಿದೆ.. ನೀವೂ ಬನ್ನಿ. ಅವರ ಮಾತುಗಳ ಕೇಳೋಣ. ಗೀತಾ ಹರಿಹರನ್ ತಮಿಳು ನಾಡಿನ ಕೊಯಮತ್ತೂರಿನಲ್ಲಿ ಜನಿಸಿದ ಗೀತಾ ಹರಿಹರನ್ ಭಾರತೀಯ ಇಂಗ್ಲಿಷ್ ಲೇಖಕಿ. ಕತೆ, ಕಾದಂಬರಿ, ಸಂಪಾದನೆ, ಅಂಕಣ ಬರಹಗಳಲ್ಲಿ ತೊಡಗಿಕೊಂಡಿರುವ ಹಾಗೂ ಮಹಿಳಾಪರ, ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿರುವ ಹೆಸರು ಅವರದು. ಮುಂಬಯಿ ಮತ್ತು ಮನಿಲಾಗಳಲ್ಲಿ ಬೆಳೆದ ಅವರು ನಂತರ ಅಮೆರಿಕದ ಕನೆಕ್ಟಿಕಟ್ನಲ್ಲಿ ಶಿಕ್ಷಣ ಮುಂದುವರೆಸಿದರು. ಅಮೆರಿಕದ ಚಾನೆಲ್ ಒಂದರಲ್ಲಿ ಕೆಲಕಾಲ ಕೆಲಸ ಮಾಡಿದ ಗೀತಾ ನಂತರ ಓರಿಯೆಂಟ್ ಲಾಂಗ್ಮನ್ ಪಬ್ಲಿಷಿಂಗ್ ಹೌಸ್ನಲ್ಲಿ…

Read More