ಗ್ರಾಮಪಂಚಾಯತಿಯಲ್ಲಿ ಇನ್ನು ಮುಂದೆ ೧೦೦ ವಿವಿಧ ಸೇವೆಗಳು ಲಭ್ಯ

  ಗ್ರಾಮೀಣ ಜನರಿಗೆ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ಅಗತ್ಯವಿರುವ ವಿವಿಧ ದಾಖಲಾತಿಗಳು ಇನ್ನು ಮುಂದೆ ಆಯಾ ಗ್ರಾಮ ಪಂಚಾಯತಿಗಳಲ್ಲೇ ಲಭ್ಯವಾಗಲಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ತಿಳಿಸಿದ್ದಾರೆ. ಸಾರ್ವಜನಿಕರ ಅನುಕೂಲಕ್ಕಾಗಿ ೧೦೦ ವಿವಿಧ ಸೇವೆಗಳನ್ನು ಒದಗಿಸಲು ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆ ಹೊಂದಿದ್ದು, ಗ್ರಾಮೀಣ ಜನತೆ ಸಾಮಾಜಿಕ, ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ವಿವಿಧ ಇಲಾಖೆಗಳ ಹಲವಾರು ದಾಖಲಾತಿ ಹಾಗೂ ಮುಖ್ಯವಾಗಿ ಪಹಣಿ ಪತ್ರ ಹಾಗೂ ನಾಡ ಕಛೇರಿಯಲ್ಲಿ ನೀಡುವಂತಹ ಸೇವೆಗಳು ಸೇರಿದಂತೆ ಇತರ ಸೇವೆಗಳನ್ನು ಇನ್ನು ಮುಂದೆ ಗ್ರಾಮ ಪಂಚಾಯತಿಗಳಲ್ಲಿಯೇ ಪಡೆಯಬಹುದಾಗಿದೆ. ಗ್ರಾ.ಪಂ ಕಛೇರಿಗಳಲ್ಲಿ ದೊರೆಯುವ ಕಂದಾಯ ಇಲಾಖೆಯ ಸೇವೆಗಳ ವಿವರ ಇಂತಿದೆ: ರೂ.೧೦ ಶುಲ್ಕ ಪಾವತಿಸಿ ಪಹಣಿ ಪತ್ರ ಪಡೆಯಬಹುದು. ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಹಿಂದುಳಿದ ವರ್ಗಗಳ ಪ್ರಮಾಣ ಪತ್ರ…

Read More