ವಿಶ್ವ ತುಳು ಅಯೊನೊ ೨೦೧೬ ಅಧ್ಯಕ್ಷರಾಗಿರುವ ಅಬುಧಾಬಿಯ ಸರ್ವೋತ್ತಮ ಶೆಟ್ಟಿ

ಕರ್ನಾಟಕ ಕಡಲ ತೀರದ ಗಡಿನಾಡು ಕಾಸರಗೋಡಿನ ಬದಿಯಡ್ಕದಲ್ಲಿ ೨೦೧೬ ಡಿಸೆಂಬರ್ ೯ರಿಂದ ೧೩ರವರೆಗೆ ನಡೆಯಲಿರುವ ಐತಿಹಾಸಿಕ “ವಿಶ್ವ ತುಳುವೆರೆ ಅಯನೊ” ದ ತುಳು ಸಾಹಿತ್ಯ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೌರವ ಅಧ್ಯಕ್ಷ ಸ್ಥಾನ ಪಡೆದಿರುವ ಅಬುಧಾಬಿಯ  ಸರ್ವೋತ್ತಮ್ ಶೆಟ್ಟಿಯವರ ಹೆಜ್ಜೆ ಗುರುತಿನ ಅವಲೋಕನ….. ವಿಶ್ವದಾದ್ಯಂತ ತುಳು ಭಾಷೆಗೆ ಸೇವೆ ಸಲ್ಲಿಸುತ್ತಿರುವ ೧೫೬ ತುಳು ಸಂಘಟನೆಗಳಿದೆ. ಯು.ಎ.ಇ. ಯಲ್ಲಿರುವ ತುಳು ಸಂಘಟನೆಗಳ ಮೂಲಕ ಕಳೆದ ಮೂರು ದಶಕಗಳಿಂದ ತುಳು ಭಾಷೆಗಾಗಿ ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿ ಗಲ್ಫ್ ದೇಶದಲ್ಲಿ ತುಳುಭಾಷೆಯನ್ನು ಸದಾ ಹಸಿರಾಗಿರಿಸಿದ ಅಬುಧಾಬಿಯಲ್ಲಿರುವ ಸರ್ವೋತ್ತಮ್ ಶೆಟ್ಟಿಯವರಿಗೆ “ವಿಶ್ವ ತುಳುವೆರೆ ಅಯನೊ” ದ ತುಳು ಸಾಹಿತ್ಯ ಸಮ್ಮೇಳನದ ಗೌರವ ಸ್ಥಾನ ಅಧ್ಯಕ್ಷ ಪಟ್ಟ ಲಭಿಸಿರುವುದು ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ತುಳುವರಿಗೆ ಸಂದ ಗೌರವವಾಗಿದೆ. ಅಪ್ಪಟ ಭಾರತೀಯನಾಗಿ, ಕನ್ನಡ, ತುಳು ಧ್ವಜವನ್ನು ಗಲ್ಪ್ ನಾಡಿನಲ್ಲಿ ಎತ್ತಿ ಹಿಡಿದ…

Read More