ಪುತ್ತೂರು : ಜೋಡಿ ಕೊಲೆಗೆ ಕಾರಣವೇನು ಗೊತ್ತಾ?

ಪುತ್ತೂರು: ತಾಲೂಕಿನ ಕುರಿಯ ಹೊಸಮಾರು ಎಂಬಲ್ಲಿ ನಡೆದ ಜೋಡಿ ಕೊಲೆ ಹಾಗೂ ಮಹಿಳೆಗೆ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು 30 ಗ್ರಾಂ ತೂಕದ  ಚಿನ್ನಾಭರಣ ಹಾಗೂ 6 ಸಾವಿರ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪುತ್ತೂರು ತಾಲೂಕಿನ ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ ಕರೀಂ ಖಾನ್ (39) ಬಂಧಿತ ಆರೋಪಿ. ಈತ ಕಳ್ಳತನ ಮಾಡುವುದಕ್ಕಾಗಿ ಮನೆಯೊಳಗೆ ಪ್ರವೇಶಿಸಿದ್ದು, ಕಳವು ನಡೆಸುವ ವೇಳೆಯಲ್ಲಿ ಮನೆ ಮಂದಿ ಎಚ್ಚರಗೊಂಡ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿರುವುದಾಗಿ ತನಿಖೆ ವೇಳೆ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕರೀಂ ಖಾನ್ ಕಳ್ಳತನ ನಡೆಸಲೆಂದು ಸೋಮವಾರ ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಕೊಗ್ಗು ಸಾಹೇಬ್ ಅವರ ಮನೆಗೆ ಹೋಗಿದ್ದು, ಮನೆಯ ಹಂಚು ಸರಿಸಿ ಒಳಗೆ ಪ್ರವೇಶಿಸಿ, ಕಳ್ಳತನ ನಡೆಸುವ ವೇಳೆಯಲಿ ಮನೆ ಮಂದಿಗೆ ಎಚ್ಚರವಾಗಿತ್ತು. ಮನೆಯವರ ಪರಿಚಯಸ್ಥನೇ…

Read More