ಅನಾಥ ಮಗುವನ್ನು ಸಾಕಿದ ದಂಪತಿಯ ಕಣ್ಣೀರಿಗೆ ಕರಗುವುದೇ ಕಾನೂನು

 ಮಕ್ಕಳಿಲ್ಲದೇ ದಶಕಗಳನ್ನೇ ಕಳೆದಿದ್ದ  ದಂಪತಿಯ ಮನೆಯಲ್ಲಿ ಎರಡು ತಿಂಗಳಿನಿಂದ ಮನೆಮಾಡಿದ್ದ ಸಂಭ್ರಮ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ. ನಮಗೆ ಆ ದೇವರೇ ಮಗು ಕರುಣಿಸಿದ ಎಂಬ ಕುಟುಂಬದ ಖುಷಿ ಕ್ಷಣಮಾತ್ರದಲ್ಲಿ ಕರಗಿಹೋಗಿದೆ. ಆದರೂ ಕೂಡ ಮಾನವೀಯತೆ ನೆಲೆಯಲ್ಲಿ ನಿಂತು ಒಮ್ಮೆ ಯೋಚನೆ ಮಾಡಿದರೆ ಮಗುವನ್ನು ನೀಡುಬಹುದು ಎಂಬ ಆಶಾಭಾವನೆಯಲ್ಲಿ ಆ ಕುಟುಂಬ ಇನ್ನೂ ಕಾಯುತ್ತಿದೆ.ಮುಬಾರಕ್ ಮತ್ತು ನಾಜೀರಾ ಬಾನು ಚಿಕ್ಕಮಗಳೂರಿನ ರಾಜೀವ್ ಗಾಂಧಿ ಬಡಾವಣೆ ನಿವಾಸಿಗಳು. ಕಳೆದೆರಡು ತಿಂಗಳ ಹಿಂದೆ ಇದೇ ಬಡಾವಣೆಯಲ್ಲಿದ್ದ  ಜಾಲಿ ಮುಳ್ಳಿನ ಪೊದೆಯ ಬಳಿ ಈ ದಂಪತಿಗೆ ನವಜಾತ  ಗಂಡು ಶಿಶು ಸಿಕ್ಕಿತ್ತು. ಮದುವೆಯಾಗಿ 10 ವರ್ಷ ಕಳೆದರೂ ಮಕ್ಕಳಿಲ್ಲ ಎನ್ನುವ ಕೊರಗಿನಲ್ಲಿದ್ದ ಈ ದಂಪತಿಯ ಬಾಳಲ್ಲಿ ಹೊಸ ಬೆಳಕು ಮೂಡಿದಂತಾಗಿತ್ತು. ಬೇಲಿಯಲ್ಲಿ ಸಿಕ್ಕಿದ್ದ  ಮಗುವಿಗೆ ಅಬ್ದುಲ್ಲಾ ಅಂತ ಹೆಸರಿಟ್ಟು ಸಂಭ್ರಮಿಸಿದರು. ಆದರೆ ಮಕ್ಕಳ ಕಲ್ಯಾಣ ಸಮಿತಿಗೆ ಈ ದಂಪತಿಗೆ ಮಗು ಸಿಕ್ಕಿರುವ…

Read More