ನನ್ನ ತಪ್ಪಿದ್ದರೆ ನಡು ರಸ್ತೆಯಲ್ಲಿ ನೇಣಿಗೇರಿಸಿ: ಸಚಿವ ಸುರೇಶ್ ಕುಮಾರ್

ಚಾಮರಾಜನಗರ: ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದ ಕೈಪಿಡಿಯಲ್ಲಿ ನನ್ನ ಪಾತ್ರ ಇಲ್ಲ. ನನ್ನದು ತಪ್ಪಿದ್ದರೆ ನನಗೆ ಚಾಮರಾಜನಗರದ ನಡು ರಸ್ತೆಯಲ್ಲಿ ನೇಣಿಗೇರಿಸಲಿ ಎಂದು ಸಚಿವ ಸುರೇಶ್ ಕುಮಾರ್ ಚಾಮರಾಜನಗರದಲ್ಲಿ ಹೇಳಿದರು. ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಂದು ಚಾಮರಾಜನಗರದ ಜಿಲ್ಲಾ ಕೇಂದ್ರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಬೇಸರ ವ್ಯಕ್ತಪಡಿಸಿದರು. ಸರ್ಕಾರ ಅಂಬೇಡ್ಕರ್ ಗೆ ಅಪಮಾನ ಮಾಡಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದರು. ನನ್ನ ಗಮನಕ್ಕೂ ತರದೆ, ಆಯುಕ್ತರ ಗಮನಕ್ಕೂ ತರದೇ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದ್ರು. ಅದನ್ನು ತಕ್ಷಣ ವೆಬ್ ಸೈಟ್ ನಿಂದ ಡಿಲೀಟ್ ಮಾಡಿದ್ದೀವಿ. ಯಾರು ಕರ್ತವ್ಯ ಲೋಪ ಮಾಡಿದ್ದಾರೆ ಅವರನ್ನು ಅಮಾನತು ಮಾಡಿದ್ದೇನೆ. ಮತ್ತು ಉನ್ನತ ತನಿಖೆಗೆ ಆದೇಶ ಮಾಡಿದ್ದೇನೆ ಎಂದ ಸಚಿವರು, ಇದರಲ್ಲಿ ನನ್ನದಾಗಲಿ ಶಿಕ್ಷಣ ಇಲಾಖೆಯ…

Read More