ಲೇಖನಿ ರಕ್ಷಣೆಗಾಗಿ ಲೇಖನಿಗಳಿಂದ ಪ್ರತಿಭಟನೆ

ಗೌರಿ ಲಂಕೇಶ ಮತ್ತು ಕಲಬುರ್ಗಿ ಹತ್ಯೆಗಳ ಹಿನ್ನೆಲೆಯಲ್ಲಿ ಲೇಖನಿ ರಕ್ಷಣೆಗಾಗಿ ಲೇಖನಿಗಳಿಂದ ಪ್ರತಿಭಟನೆ ಇಂದು ಸಂಜೆ ಗದಗದಲ್ಲಿ ನಡೆಯಿತು. ವಿಚಾರವಾದಿ ಚಿಂತಕರಾದ ಡಾ.ಕಲಬುರ್ಗಿ, ದಾಬೋಲ್ಕರ, ಪನ್ಸಾರೆ ಹಾಗೂ ಖ್ಯಾತ ಪತ್ರಕರ್ತೆ, ಪ್ರಖರ ವಿಚಾರಧಾರೆಗಳ ಚಿಂತಕಿ, ಗೌರಿ ಲಂಕೇಶ್ ಅವರನ್ನು ಕೋಮುವಾದಿ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವುದನ್ನು ಖಂಡಿಸಿ ಹತ್ಯಾಕೋರರನ್ನು ಬಂಧಿಸಲು ಒತ್ತಾಯಿಸಿ ಹತ್ಯಾಕೋರರನ್ನು ಬಂಧಿಸುವ ತನಕ ಗದುಗಿನಲ್ಲಿ ಪ್ರತಿ ತಿಂಗಳ 15 ತಾರೀಖು ಮತ್ತು 30 ತಾರೀಖಗಳಂದು ನಿರಂತರ ಪ್ರತಿಭಟನೆ ಗದಗ ಜಿಲ್ಲೆಯ ಗೌರಿ ಲಂಕೇಶ್ ಕಲಬುರ್ಗಿ ದಾಭೋಲ್ಕರ್ ಪನ್ಸಾರೆ ಹತ್ಯಾ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಗದುಗಿನಲ್ಲಿ ನಡೆಯುತ್ತಿದೆ. ಈ ಬಾರಿ ಈ ಹತ್ಯೆಗಳನ್ನು ಖಂಡಿಸಿ ಲೇಖಕರು, ಪ್ರಜ್ಞಾವಂತ ಚಿಂತಕರು ಹೋರಾಟಗಾರರು ‘ಲೇಖನಿ ರಕ್ಷಣೆಗಾಗಿ ಲೇಖನಿಗಳಿಂದ’ ಎಂಬ’ ಹೆಸರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಸೇರಿದ ಲೇಖಕರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ತಮ್ಮ ಪೆನ್ನು ಕೊಟ್ಟು ಪ್ರತಿಭಟನೆ…

Read More