ಜಾತಿಯ ಪೆಡಂಭೂತಕ್ಕೆ ಬಲಿಯಾದ ಜೀವಗಳು

 ಸೈರಾಟ್ ಸಿನಿಮಾ ಮಾದರಿಯಲ್ಲಿ  ಪ್ರೇಮಿಗಳನ್ನ ಕೊಂದು ಹಾಕಿದ ಪಾಪಿಗಳು Gadag :   ಗದಗ ಜಿಲ್ಲೆಯ ರೋಣ ತಾಲೂಕಿನ ಲಕ್ಕಲಕಟ್ಟಿ ಎಂಬ ಸಣ್ಣ ಊರಲ್ಲಿ ಜಾತಿಯ ಕಾರಣಕ್ಕೆ ಎರಡು ಕೊಲೆಗಳಾಗಿವೆ.   ಕೊಲೆಯಾದ ಇಬ್ಬರು ಕೆಳಜಾತಿಯ ಯುವಕ ಯುವತಿಯರೇ. ರಮೇಶ ಮಾದರ ದಲಿತ ಹುಡುಗ, ಹುಡುಗಿ ಲಂಬಾಣಿ ಸಮುದಾಯದ ಗಂಗಮ್ಮ. ಜಾತಿಯತೆ ಅನ್ನೋದು ಗ್ರಾಮೀಣ ಪ್ರದೇಶದಲ್ಲಿ ಎಷ್ಟೊಂದು ಬಲವಾಗಿದೆ. ಅದ್ರಲ್ಲೂ ಒಂದುಕ್ಕೊಂದು ಆತುಕೊಂಡು ತಾಯ್ತನದಿಂದ ಬದುಕಬೇಕಿದ್ದ ತಳ ಸಮುದಾಯಗಳನ್ನೂ ಜಾತಿಯತೆಯ ಕ್ರೌರ್ಯ ಎಷ್ಟೊಂದು ಆಳದಲ್ಲಿ ಬೇರು ಬಿಟ್ಟಿದೆ ಎನ್ನುವುದಕ್ಕೆ ಇದೊಂದು ನಿದರ್ಶನವಷ್ಟೆ. ದಲಿತ ಕುಟುಂಬದ ರಮೇಶ ಮಾದರ ಎಂಬ ಹುಡುಗ ಲಂಬಾಣಿಯ ಗಂಗಮ್ಮ ನಾಲ್ಕು ವರ್ಷಗಳ ಹಿಂದೆ ತೀವ್ರವಾಗಿ ಪ್ರೀತಿಸುತ್ತಿದ್ದರು. ಪ್ರೀತಿಯ ಆರಂಭದ ದಿನಗಳಲ್ಲಿ ಇವರಿಬ್ಬರು ಊರ ಹೊರಗಿನ ಹೊಲದಲ್ಲಿ ಸಿಕ್ಕಿ ಬಿದ್ದಾಗಲೇ ರಮೇಶನನ್ನು ಮೈ ಬಾವು ಬರುವ ಹಾಗೆ ಹೊಡೆದು ಊರು ಬಿಡಿಸಿದ್ದರು. ಇದಾದ ಎರಡ್ಮೂರು ತಿಂಗಳು ಕಾಯ್ದಿದ್ದ ರಮೇಶ…

Read More