ಅದ್ಬುತವಾದ ಅಭಿನಯದಿಂದ ಜನಮನಸೆಳೆದ ನಾಟಕ ಓದಿರಿ

ಜನಮನದಾಟ ತಂಡದಿಂದ ನಡೆದ ಓದಿರಿ ನಾಟಕ ಜನಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಅದ್ಬುತವಾದ ಅಭಿನಯ ಮತ್ತು ಹಿನ್ನೆಲೆ ಸಂಗೀತ ಹಾಗೂ ಬೆಳಕಿನ ಸಂಯೋಜನೆಯಿಂದ ಜನರು ಮಂತ್ರಮುಗ್ದರಾಗಿ ನಾಟಕವನ್ನು ವೀಕ್ಷಿಸಿದರು ಅದ್ಬುತ ಎನ್ನುವಂತೆ  ನಾಟಕ ನಡೆಯುವಾಗ ಇಡೀ ಸಾಹಿತ್ಯ ಭವನದಲ್ಲಿ ಸೂಜಿ ಬಿದ್ದರೂ ಕೇಳಿಸುವಂತಹ ವಾತಾವರಣ       ನಾಟಕ ಮುಗಿದ ಮೇಲೆ ಡಿಂಗ್ರಿ ನರೇಶ್ ಪಾತ್ರ ಪರಿಚಯ ಮಾಡುತ್ತಿದ್ದರೆ ಇಡೀ ಸಭಾಂಗಣವೇ ಚಪ್ಪಾಳೆ ತಟ್ಟಿತು. ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ ಕಲಾವಿದರು ಜನತೆಯ ಮೇಲೆ ಮೋಡಿ ಮಾಡಿದರು.  

Read More