ಜೆಸ್ಕಾಂ ಗುತ್ತಿಗೆ ನೌಕರರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡುವಂತೆ ಮನವಿ

ಆಪರೇಟರ್ ಹುದ್ದೆ ನೇಮಕಾತಿ ಕೈ ಬಿಡುವಂತೆ, ಜೆಸ್ಕಾಂ ಗುತ್ತಿಗೆ ನೌಕರರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡುವಂತೆ  ಮನವಿ ***** ಜೆಸ್ಕಾಂ ಕಂಪನಿಯು ಸುಮಾರು ೫೪೦ ಕಿರಿಯ ಸ್ಟೇಷನ್ ಆಪರೇಟರ್‌ಗಳ ನೇಮಕಾತಿಯನ್ನು ಘೋಷಿಸುವ ಮೂಲಕ ಈಗಾಗಲೇ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸಿರುವ ಗುತ್ತಿಗೆ ನೌಕರರನ್ನು ಬೀದಿಗೆ ತಳ್ಳುವ ಈ ನೇಮಕಾತಿಯನ್ನು ಕೈ ಬಿಡಬೇಕೆಂದು ಂIUಖಿUಅ ಸಂಯೋಜಿತ ಕರ್ನಾಟಕ ವಿದ್ಯುತ್ ಸರಬರಾಜು ಕಂಪನಿಗಳ ಗುತ್ತಿಗೆ ನೌಕರರ ಸಂಘ ಹಾಗೂ ಜೆಸ್ಕಾಂ ವಿದ್ಯುತ್ ಸರಬರಾಜು ಗುತ್ತಿಗೆ ನೌಕರರ ಸಂಘಟನೆಗಳು ಆಗ್ರಹಿಸುತ್ತವೆ. ಗುತ್ತಿಗೆ ನೌಕರರನ್ನು ವಜಾಗೊಳಿಸಬಾರದು, ಈ ನೌಕರರನ್ನು ಖಾಯಂಗೊಳಿಸಲು ವಿಶೇಷ ನೇಮಕಾತಿ ನಿಯಮಾವಳಿಯನ್ನು ರೂಪಿಸಬೇಕೆಂದು, ಅಲ್ಲಿಯವರೆಗೂ ನೌಕರರನ್ನು ನೇರ ಗುತ್ತಿಗೆಯಡಿ ಮುಂದುವರೆಸಬೇಕು, ಇತ್ತೀಚೆಗೆ ಪರಿಷ್ಕೃತವಾದ ಹೆಚ್ಚಳವಾದ ವೇತನ, ಪಿ.ಎಫ್, ಇಎಸ್‌ಐ ಹಾಗೂ ಇತರ ಸುರಕ್ಷಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಮುಂತಾದ ಕೆಳಗೆ ಕಾಣಿಸಿದ ಬೇಡಿಕೆಗಳನ್ನು ಇದೀಗ ತಮ್ಮ ಅವಗಾಹನೆಗೆ…

Read More