ಚುನಾವಣೆಗಾಗಿ ಹಣ ಸಂಗ್ರಹಿಸುತ್ತಿರುವ ರಾಜ್ಯ ಸರಕಾರ : ಕುಮಾರಸ್ವಾಮಿ ಆರೋಪ

ಮಡಿಕೇರಿ,ಎ.21:ರಾಜ್ಯ ಕಾಂಗ್ರೆಸ್ ಸರ್ಕಾರ ಜನಪರವಲ್ಲದ ಬೃಹತ್ ಯೋಜನೆಗಳ ಹೆಸರಿನಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಲು ಹಣ ಸಂಗ್ರಹಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪರವಲ್ಲದ ಯೋಜನೆಗಳಿಂದ ಕಾಂಗ್ರೆಸ್ ಲಾಭ ಮಾಡಿಕೊಳ್ಳುತ್ತಿದೆಯೇ ಹೊರತು ಇಂತಹ ಯೋಜನೆಗಳು ಜನರಿಗೆ ತಲುಪುವುದಿಲ್ಲವೆಂದು ಟೀಕಿಸಿದರು. ಇತ್ತೀಚೆಗೆ ಕಾಂಗ್ರೆಸ್ ಶಾಸಕರೊಬ್ಬರು ಈ ಹಿಂದೆ ತನಗೆ ಚುನಾವಣೆ ಎದುರಿಸಲು ಹಣದ ಕೊರತೆ ಇತ್ತು. ಆದರೆ, ಮುಂದಿನ ಚುನಾವಣೆಗೆ ಹಣದ ಕೊರತೆ ಇಲ್ಲ, 10 ಕೋಟಿ ಇದೆಯೆಂದು ಮುಕ್ತವಾಗಿ ಹೇಳಿಕೆ ನೀಡಿದ್ದಾರೆ. ಇವರ ಇಂತಹ ಹೇಳಿಕೆಗಳು ಕಾಂಗ್ರೆಸ್ ಮುಂದಿನ ಚುನಾವಣೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನುವುದನ್ನು ಬಹಿರಂಗ ಪಡಿಸುತ್ತಿದೆ. ಚುನಾವಣೆಯ ನಿಗಧಿತ ಮಿತಿಗೂ ಮೀರಿ ವೆಚ್ಚ ಮಾಡುವ ಹಣವನ್ನು ಕಾಂಗ್ರೆಸ್ ಪಕ್ಷ ನೀಡುತ್ತದೆಯೇ ಅಥವಾ ಅದು ಅವರ ಸ್ವಂತ ಗಳಿಕೆಯ ಹಣವೆ ಎಂದು ಕುಮಾರಸ್ವಾಮಿ…

Read More