ಬುದ್ಧಮಾರ್ಗದಿಂದ ಮಾತ್ರ ಜಗತ್ತಿಗೆ ಶಾಂತಿ: ಯಡಹಳ್ಳಿ

ಸಾರಿಪುತ್ರ ಬುದ್ಧವಿಹಾರದಲ್ಲಿ ಬುದ್ಧ ಪೂರ್ಣಿಮೆ ಆಚರಣೆ ವಿಜಯಪುರ : ಭಗವಾನ್ ಬುದ್ಧರ ತತ್ವ ಸಿದ್ಧಾಂತಗಳು ಮಾತ್ರ ಇಂದು ಜಗತ್ತನ್ನು ಭಯ ಮತ್ತು ಆತಂಕದಿಂದ ಪಾರು ಮಾಡುವ ಶಕ್ತಿಯನ್ನು ಹೊಂದಿವೆ ಎಂದು ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ರಾಜಶೇಖರ ಯಡಹಳ್ಳಿ ಹೇಳಿದರು. ಇಲ್ಲಿನ ಜಲಗನರದ ಸಾರಿಪುತ್ರ ಬುದ್ಧವಿಹಾರದಲ್ಲಿ ಇಂದು ಜರುಗಿದ ೨೫೬೩ನೆಯ ಬುದ್ಧಪೂರ್ಣಿಮೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿದ್ಧಾರ್ಥ ಗೌತಮರು ನೀರಿಗಾಗಿ ಯುದ್ಧ ಬೇಡ ಎಂದು ಗೃಹತ್ಯಾಗ ಮಾಡಿದರು. ಜಗತ್ತಿನ ಮಾನವರ ದುಃಖದ ಮೂಲವನ್ನು ಕಂಡುಹಿಡಿಯಲು ಅವರು ಕಠಿಣ ತಪಸ್ಸನ್ನು ಮಾಡಿದರು. ದೇಹದಂಡನೆಯಿಂದ ಯವ ಲಾಭವೂ ಇಲ್ಲ ಎಂಬುದನ್ನು ಕಂಡುಕೊಂಡ ಅವರು ಮಧ್ಯಮಮಾರ್ಗದ ಮೂಲಕ ಬೋಧಿಪ್ರಾಪ್ತಿ ಮಾಡಿಕೊಂಡರು. ರಾಗ-ದ್ವೇಷಗಳಿಲ್ಲದ, ದುಃಖ-ದುಮ್ಮಾನಗಳಿಲ್ಲದ, ಶೋಷಣೆ ರಹಿತ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಸ್ವಂತ ಸುಖವೈಭೋಗಗಳನ್ನು ತೊರೆದ ಸಿದ್ಧಾರ್ಥ ಗೌತಮರು ತಾವು ಕಂಡುಕೊಂಡ ಸತ್ಯವನ್ನು ಜಗತ್ತಿಗೆ ಬೋಧಿಸಿದರು. ಮನುಷ್ಯನು ಶಾಂತಿ ಮತ್ತು ನೆಮ್ಮದಿಯ ಬದುಕಿಗಾಗಿ…

Read More