ಇದು ದಮನಿತ ಸಮುದಾಯವೊಂದರ ಸಮಾವೇಶ: ಮುನೀರ್ ಕಾಟಿಪಳ್ಳ

ಡಿವೈಎಫ್‌ಐ ವತಿಯಿಂದ ಮಂಗಳೂರಿನಲ್ಲಿ ಮೇ 14 ಮತ್ತು 15ರಂದು ಹಮ್ಮಿಕೊಳ್ಳಲಾಗಿರುವ ಮುಸ್ಲಿಮ್ ಯುವ ಸಮಾವೇಶ ಮೆಚ್ಚುಗೆ, ಟೀಕೆ, ವಿಮರ್ಶೆ ಇತ್ಯಾದಿಗಳ ಮೂಲಕ ಚರ್ಚೆಯಲ್ಲಿದೆ. ಈ ಸಮಾವೇಶದ ಉದ್ದೇಶ, ಗುರಿಯ ಕುರಿತಂತೆ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪತ್ರಿಕೆಯ ಜೊತೆಗೆ ಮಾತನಾಡಿದ್ದಾರೆ. ಎದುರಾಳಿಗಳ ಟೀಕೆ, ವಿಮರ್ಶೆಗಳಿಗೂ ಅವರು ಸಮಚಿತ್ತದಿಂದ ಪ್ರತಿಕ್ರಿಯಿಸಿದ್ದಾರೆ. 1. ಬಹುಶಃ ಎಡಪಕ್ಷಗಳ ಇತಿಹಾಸದಲ್ಲೇ ಮೊದಲ ಬಾರಿ ಮುಸ್ಲಿಂ ಯುವ ಸಮಾವೇಶವನ್ನು ಹಮ್ಮಿಕೊಂಡಿದ್ದೀರಿ. ಈ ವರೆಗೆ ಧರ್ಮಾತೀತವಾಗಿ ಜನ ಸಂಘಟನೆ ಮಾಡಿಕೊಂಡು ಬಂದ ಎಡ ಚಿಂತನೆಗಳಿಗೆ ಇದು ವಿರುದ್ಧವಾಗಿಲ್ಲವೇ ? ಧಾರ್ಮಿಕ ಅಸ್ಮಿತೆಯ ಭಾಗವಾಗಿ ಈ ಸಮಾವೇಶವನ್ನು ನಾವು ಹಮ್ಮಿಕೊಂಡಿಲ್ಲ. ಮುಸ್ಲಿಮ್ ಸಮುದಾಯ ಒಂದು ದಮನಿತ ಸಮುದಾಯ. ಈ ದಮನಿತ ಸಮುದಾಯದ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಅದು ಎದುರಿಸುತ್ತಿರುವ ಇಕ್ಕಟ್ಟು ಹಾಗೂ ಬಿಕ್ಕಟ್ಟುಗಳಿಂದ ಪಾರಾಗಲು ರೂಪಿಸಬೇಕಾದ ಕಾರ್ಯತಂತ್ರಗಳನ್ನು ಚರ್ಚಿಸುವ ಉದ್ದೇಶ ಇದರ ಹಿಂದಿದೆ. ಇದೇ ಮೊದಲ ಬಾರಿಗೆ…

Read More