ಶ್ರೀ ರೇಣುಕಾಚಾರ್ಯ ಜಯಂತಿ ಸಿದ್ಧತಾ ಸಭೆ

ಕೊಪ್ಪಳ, : ನಗರದ ಶ್ರೀ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಜಂಗಮ ಸಮಾಜ ಕೊಪ್ಪಳದ ವತಿಯಿಂದ ಶ್ರೀ ರೇಣುಕಾಚಾರ್ಯ ಜಯಂತಿ ಇದೇ ಜೂನ್ ೨೭ ಗುರುವಾರ ಹಮ್ಮಿಕೊಳ್ಳಲಾಗಿದೆ. ಜಯಂತಿಯ ಪ್ರಯುಕ್ತವಾಗಿ ಶ್ರೀಶೈಲ್, ಉಜ್ಜಯಿನಿ, ರಂಭಾಪುರಿ ಹಾಗೂ ಕಾಶಿ ನಾಲ್ಕು ಪೀಠದ ಜಗದ್ಗರುಗಳು ಆಗಮಿಸುತ್ತಾರೆ ಎಂದು ಜಂಗಮ ಸಮಾಜದ ಮುಖಂಡರಾದ ತಿಪ್ಪರುದ್ರಸ್ವಾಮಿ ಹೇಳಿದರು. ಅವರು ನಗರದ ಶ್ರೀ ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನದಲ್ಲಿ ರವಿವಾರದಂದು ಶ್ರೀ ರೇಣುಕಾಚಾರ್ಯ ಜಯಂತಿಯ ಸಿದ್ಧತಾ ಸಭೆಯಲ್ಲಿ ಮಾತನಾಡಿದರು. ನಂತರ ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಹಾಲಪ್ಪ ಆಚಾರ, ಪರಣ್ಣ ಮುನವಳ್ಳಿ, ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ್ ರವರ ಜೊತೆ ಜಯಂತಿಯ ಸಿದ್ಧತೆ ಬಗ್ಗೆ ಜಂಗಮ ಸಮಾಜದ ಮುಖಂಡರು ಚರ್ಚಿಸಿದರು. ಸಭೆಯಲ್ಲಿ ಜಂಗಮ ಸಮಾಜದ ಮುಖಂಡರಾದ ವಿರೇಶ ಮಾಹಾಂತಯ್ಯನಮಠ, ರುದ್ರಯ್ಯ ವಕೀಲರು, ಸಿ.ವಿ.ಕಲ್ಮಠ, ವಿರುಪಾಕ್ಷಯ್ಯ ಗದಗಿನಮಠ, ಬಿ.ಕೆ. ಹಿರೇಮಠ,…

Read More