ನೀತಿ ಆಯೋಗ : ಸೌರವಿದ್ಯುತ್ ಘಟಕ ಸ್ಥಾಪಿಸಲು ಸಂಸದ ಸಂಗಣ್ಣ ಕರಡಿ ಪ್ರಸ್ತಾವನೆ

ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ 2,960 ಹೆಕ್ಟೇರ್ ಲಭ್ಯ | ನೀತಿ ಆಯೋಗಕ್ಕೆ ಪ್ರಸ್ತಾವನೆ ಸೌರ ವಿದ್ಯುತ್ ಘಟಕಕ್ಕೆ ಸಂಸದ ಸಂಗಣ್ಣ ಮನವಿ ಕೊಪ್ಪಳ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಜಾರಿಗೊಳಿಸಿದ ಸೌಭಾಗ್ಯ ಯೋಜನೆ ಅಂಗವಾಗಿ, ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೌರವಿದ್ಯುತ್ ಘಟಕ ಸ್ಥಾಪಿಸಬೇಕೆಂದು ಸಂಸದ ಸಂಗಣ್ಣ ಕರಡಿ ಅವರು ಪ್ರಸ್ತಾವನೆ ಸಲ್ಲಿಸಿದ್ದಾರೆ. ನೀತಿ ಆಯೋಗದ ಉಪಾಧ್ಯಕ್ಷರೂ ಆಗಿರುವ ಅರ್ಥಶಾಸ್ತ್ರಜ್ಞ ಡಾ. ರಾಜೀವ್‍ಕುಮಾರ್ ಅವರನ್ನು ಬುಧವಾರ ನವದೆಹಲಿಯಲ್ಲಿ ಭೇಟಿಯಾದ ಸಂಸದ ಸಂಗಣ್ಣ ಕರಡಿ, ಉದ್ದೇಶಿತ ಸ್ಥಳದ ವಿವರಗಳನ್ನೊಳಗೊಂಡ ಪ್ರಸ್ತಾವನೆಯನ್ನು ಸಲ್ಲಿಸಿದರು. ಸದರಿ ಘಟಕ ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿದೆ. ಈ ಪ್ರದೇಶ ಕೃಷಿಯೇತರ ಭೂಮಿಯಾಗಿದ್ದು, ಇಲ್ಲಿ ಯಾವುದೇ ಬೆಳೆ ಬೆಳೆಯುತ್ತಿಲ್ಲ. ಕೊಪ್ಪಳ ಕ್ಷೇತ್ರದ ಈ ಪ್ರದೇಶದಲ್ಲಿ ಬೇಸಿಗೆಯಲ್ಲಿ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್‍ವರೆಗೆ ತಲುಪುವುದರಿಂದ, ಸೌರ ವಿದ್ಯುತ್ ಘಟಕ ಸ್ಥಾಪನೆಗೆ…

Read More