ಕಾಂಗ್ರೆಸ್ ಗೆಲುವು ಖಚಿತ – ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ : ೧೫ ಗೊಂಡಬಾಳ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಹಾಲವರ್ತಿ, ಕುಣಿಕೇರಿ ತಾಂಡಾ, ಕುಣಿಕೇರಿ, ಬಗನಾಳ, ಚಿಕ್ಕಬಗನಾಳ, ಕರ್ಕಿಹಳ್ಳಿ, ಅಲ್ಲಾನಗರ ಗ್ರಾಮಗಳಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮತ ಯಾಚನೆ ಮಾಡಿ ಬಳಿಕ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಘವೇಂದ್ರ ಹಿಟ್ನಾಳ ಕೊಪ್ಪಳ ಕ್ಷೇತ್ರಕ್ಕೆ ಈ ಐದು ವರ್ಷದಲ್ಲಿ ರೂ. ೨೨೩೦ ಕೋಟಿ ಅನುದಾನ ಬೀಡುಗಡೆಯಾಗಿದ್ದು ಕೊಪ್ಪಳ ಕ್ಷೇತ್ರದ ಮೂವತ್ತು ವರ್ಷದ ಇತಿಹಾಸದಲ್ಲಿ ಇಷ್ಟೊಂದು ಅನುದಾನ ಬಿಡುಗಡೆಯಾಗಿದ್ದು ಅಭಿವೃದ್ಧಿಯ ಮೈಲುಗಲ್ಲಾಗಿದೆ. ಶಿಕ್ಷಣಕ್ಷೇತ್ರ, ನೀರಾವರಿ, ಕೃಷಿ ಕ್ಷೇತ್ರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಈ ಅನುದಾನದಿಂದ ಸಾಕಷ್ಟು ಸಹಕಾರಿಯಾಗಿದೆ ಚೆಕ್‌ಡ್ಯಾಮ್, ಬ್ರಿಜ್‌ಕಮ್ ಬ್ಯಾರೇಜ್, ಪಿಜಿಸೆಂಟರ್, ಐಟಿಐ ಕಾಲೇಜ, ಡಿಪ್ಲೋಮಾ ಕಾಲೇಜು, ವೈಧ್ಯಕೀಯ ಕಾಲೇಜು ಹಾಗೂ ಹೆಚ್ಚುವರಿ ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜಗಳು ನಿರ್ಮಾಣವಾಗಿವೆ. ಶೀಘ್ರದಲ್ಲಿಯೇ ನಗರದಲ್ಲಿ ಕಾಂಗ್ರೆಸ್ ಸರ್ಕಾರದ ಅತ್ಯಂತ ಮಹತ್ತರ ಯೋಜನೆಯಾದ ಇಂದಿರಾ ಕ್ಯಾಂಟಿನ್ ಪ್ರಾರಂಭಗೊಳ್ಳಲಿದ್ದು ಬಡ ಹಾಗೂ…

Read More