ಅತ್ಯಾಚಾರಿಯ ಕಿವಿಯೊಂದಿಗೆ ಎಸ್ಪಿ ಕಚೇರಿಗೆ ಬಂದ ಸಂತ್ರಸ್ತೆ

ದುಷ್ಕರ್ಮಿಗಳ ವಿರುದ್ಧ ಎಫ್ ಐಆರ್ ದಾಖಲಿಸದ ಪೊಲೀಸರು ಲಕ್ನೋ, ಅ. : ಪ್ರಥಮ ಮಾಹಿತಿ ವರದಿ ದಾಖಲಿಸಲು ವಿಫಲವಾದ ಅತ್ಯಾಚಾರ ಸಂತ್ರಸ್ತೆಯೋರ್ವರು, ಅತ್ಯಾಚಾರ ಎಸಗಿದ ವ್ಯಕ್ತಿಯ ಕಿವಿಯ ತುಂಡಿನೊಂದಿಗೆ ಗುರುವಾರ ಆಲಿಗಢ ಎಸ್ಪಿ ಕಚೇರಿಗೆ ಆಗಮಿಸಿದ್ದರು. ಈ ಸಂದರ್ಭ ಹಿರಿಯ ಅಧಿಕಾರಿ ಉಪಸ್ಥಿತರಿರಲಿಲ್ಲ. ಮಹಿಳೆ ಕಿವಿಯ ತುಂಡನ್ನು ಪೊಲೀಸ್ ಅಧೀಕ್ಷಕ (ಗ್ರಾಮೀಣ) ಯಶ್ವೀರ್ ಸಿಂಗ್ ಅವರ ಮುಂದಿರಿಸಿದರು ಹಾಗೂ ಎರಡು ದಿನಗಳಾದರೂ ಪೊಲೀಸರು ತನ್ನ ಪ್ರಕರಣದ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು. ಅನಂತರ ಸಿಂಗ್ ಅವರು ಈ ಪ್ರಕರಣದಲ್ಲಿ ಭಾಗಿಯಾದ ಎರಡೂ ಗುಂಪುಗಳ ವಿರುದ್ಧ ಪ್ರಥಮ ಮಾಹಿತಿ ದಾಖಲಿಸಲು ಆದೇಶಿಸಿದರು. “ಸೋಮವಾರ ರಾತ್ರಿ ನಾನು ಮಕ್ಕಳೊಂದಿಗೆ ಮಲಗಿದ್ದ ಸಂದರ್ಭ ನೆರೆಯ ನಾಲ್ವರು ಮನೆ ಪ್ರವೇಶಿಸಿ ಅತ್ಯಾಚಾರ ಎಸಗಿದ್ದಾರೆ. ಈ ಸಂದರ್ಭ ಪತಿ ಸಮೀಪದ ಗುಡಿಸಲಿನಲ್ಲಿ ಮಲಗಿದ್ದರು. ಕೂಗು ಕೇಳಿ ಅವರು ಓಡಿ ಬಂದರು. ಅದರೆ,…

Read More