ನಿರ್ಗತಿಕರಿಗೆ ಹಾಗೂ ಅಲೇಮಾರಿಗಳಿಗೆ ಊಟದ ವ್ಯವಸ್ಥೆ : ಸಿದ್ದರಾಮೇಶ್ವರ

ಕೊಪ್ಪಳ ಮಾ : ನಿರ್ಗತಿಕರಿಗೆ ಹಾಗೂ ಅಲೇಮಾರಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾ ನಗರಾಭಿವೃಧ್ಧಿ ಕೋಶದ ಯೋಜನಾ ನಿರ್ದೇಶಕ ಸಿದ್ದರಾಮೇಶ್ವರ ಅವರು ತಿಳಿಸಿದ್ದಾರೆ. ಕೋವಿಡ್ -19 ಕೊರೋನಾ ಸೋಂಕು ಹರಡುತ್ತಿರುವದರಿಂದ, ದೇಶವ್ಯಾಪಿ ಏಪ್ರೀಲ್- 14ರವರೆಗೆ ಸಂಪೂರ್ಣ ಬಂದ್ ಘೋಷಿಸಿರುವದರಿಂದ, ಎಲ್ಲಾ ಹೋಟಲ್‌ಗಳು ಬೀದಿ ಬದಿ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತಗೊಂಡಿರುತ್ತವೆ. ಈ ಪ್ರಯುಕ್ತ ಕೊಪ್ಪಳ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ ರಹಿತರು, ನಿರ್ಗತಿಕರಿಗೆ ಹಾಗೂ ಅಲೇಮಾರಿಗಳಿಗೆ ಆಹಾರ, ವಸತಿ ಮತ್ತು ಕುಡಿಯುವ ನೀರಿನ ಕೊರತೆ ಉಂಟಾಗದAತೆ ಎನ್,ಜಿ,ಓ ಮತ್ತು ಸ್ವಯಂ ಸೇವಕರ ಸಹಕಾರದೊಂದಿಗೆ ಉಪಹಾರ ಊಟದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎನ್.ಜಿ.ಓ ಮತ್ತು ಸ್ವಯಂ ಸೇವಕರ ವಿವರ; ಜಿಲ್ಲೆಯ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೇಮಕವಾದ ಎನ್,ಜಿ,ಓ ಮತ್ತು ಸ್ವಯಂ ಸೇವಕರ ವಿವರ ಇಂತಿದೆ. ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಹುಸೇನ್ ಬಾಷಾ…

Read More