ಯುವಜನೋತ್ಸವದಿಂದ ಯುವಶಕ್ತಿಗೆ ಚೈತನ್ಯ-ರಾಮಚಂದ್ರನ್

. ಯುವಜನೋತ್ಸವದಂಥಹ ಕಾರ್ಯಕ್ರಮಗಳಿಂದ ಯುವಶಕ್ತಿಗೆ ಚೈತನ್ಯ ದೊರೆಯುತ್ತದೆ ಎಂದು ಜಿಲ್ಲಾ ಪಂಚಾಯತ ಸಿಇಓ ರಾಮಚಂದ್ರನ್ ಅಭಿಪ್ರಾಯಪಟ್ಟರು. ಅವರು ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕನ್ನಡ ಜಾನಪದ ಪರಿಷತ್ತು ಹಾಗೂ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಅಗಿದ್ದ ಜಿಲ್ಲಾಮಟ್ಟದ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದರು. ಯುವಜನರು ನಿರಾಶರಾಗಬಾರದು, ಎಲ್ಲವನ್ನು ನಿರಂತರ ಪರಿಶ್ರಮದಿಂದ ಸಾಧಿಸಿ ಮುನ್ನಡೆಯಬೇಕು, ಬದುಕಿನಲ್ಲಿ ಉತ್ಸಾಹವನ್ನು ಬಿಡಬಾರದು, ಸಂಗೀತ ಸಾಹಿತ್ಯಕ್ಕೆ ಅಂಥಹ ಶಕ್ತಿ ಇದೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ರಾಅಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಶರಣಪ್ಪ ವಡಿಗೇರಿ ನಿರಂತರವಾಗಿ ಬೆಳೆಯುತ್ತಿರುವ ಭಾರತದಲ್ಲಿ ಇಲ್ಲಿನ ಸಂಸ್ಕೃತಿಯೇ ಜೀವಾಳ, ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂಥಹ ಮೇಳಗಳನ್ನು ಇಲಾಖೆ ಹಮ್ಮಿಕೊಳ್ಳುತ್ತದೆ, ಅದರ ಉಪಯೋಗವನ್ನು ಯುವಜನರು ಸರಿಯಾಗಿ ಬಳಸಿಕೊಳ್ಳಬೇಕು ಎಂದರು. ಜಿಲ್ಲಾ ಪಂಚಾಯತ ಸದಸ್ಯ ರಾಮಣ್ಣ ಚೌಡ್ಕಿ…

Read More