92.7 ಬಿಗ್ ಎಫ್ಎಂ ಬೆಂಗಳೂರಿನಲ್ಲಿ ಒಂದು ಹೆಜ್ಜೆ ಮುಂದಿಟ್ಟು, ಪ್ಲಾಸ್ಟಿಕ್ ಸಂಗ್ರಹ ಡ್ರೈವ್ 

ಪ್ಲಾಸ್ಟಿಕ್ ಸಂಗ್ರಹವನ್ನು ಹೆಚ್ಚಿಸಲು 92.7 ಬಿಗ್ ಎಫ್ಎಂ ಬೆಂಗಳೂರಿನಲ್ಲಿ ಒಂದು ಹೆಜ್ಜೆ ಮುಂದಿಟ್ಟು, ಪ್ಲಾಸ್ಟಿಕ್ ಸಂಗ್ರಹ ಡ್ರೈವ್ ಗಳನ್ನು ಆರಂಭಿಸಿದೆ 92.7 ಬಿಗ್ ಎಫ್‌ಎಂ ರೇಡಿಯೊ ಜಾಕಿಗಳು ಬೆಂಗಳೂರಿನಲ್ಲಿ  ಪ್ಲ್ಯಾಸ್ಟಿಕ್ ಅನ್ನು ಸಂಗ್ರಹಿಸಲು ವೈಯಕ್ತಿಕವಾಗಿ ಮನೆಮನೆಗೆ ಭೇಟಿ ನೀಡುತ್ತಾರೆ, ಈ ಮೂಲಕ ಪ್ಲ್ಯಾಸ್ಟಿಕ್ ಬೇಕು ಅಭಿಯಾನಕ್ಕೆ ಉತ್ತಮ ಆರಂಭ ನೀಡುತ್ತಾರೆ ಉತ್ತಮ ಪ್ರಪಂಚ ನಿರ್ಮಾಣಕ್ಕೆ ನಾಗರಿಕರ ನೇತೃತ್ವದ ಅಭಿಯಾನ # ಪ್ಲ್ಯಾಸ್ಟಿಕ್ ಬೇಕು ನ ಭಾಗವಾಗಿ, ಪ್ಲಾಸ್ಟಿಕ್ ಸಂಗ್ರಹಿಸುವ ಮೂಲಕ ಪರಿಸರದಲ್ಲಿ ಮಹತ್ತರ ಸುಧಾರಣೆ ತರುವಲ್ಲಿ ಪ್ರಮುಖ ಪಾತ್ರ ವಹಿಸಲು ಕೇಳಿಕೊಳ್ಳಲು ರೇಡಿಯೊ ಸ್ಟೇಷನ್ ಬೆಂಗಳೂರಿನ ಕೇಳುಗರನ್ನು ಭೇಟಿ ಮಾಡಿತು, ಹೀಗೆ ಸಂಗ್ರಹಿಸಿದ ಕಸವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆ ನಿರ್ಮಾಣಕ್ಕೆ ಮರುಬಳಕೆ ಮಾಡಲಾಗುವುದು ಬೆಂಗಳೂರು,  : ಡಿಸೆಂಬರ್ 2019: ಸಮಾಜದಲ್ಲಿ  ಬದಲಾವಣೆ ತರಬೇಕೆಂಬ ಉದ್ದೇಶದಿಂದ, ಭಾರತದ ಅತಿದೊಡ್ಡ ರೇಡಿಯೊ ನೆಟ್‌ವರ್ಕ್‌ಗಳಲ್ಲಿ ಒಂದಾದ 92.7 ಬಿಗ್ ಎಫ್‌ಎಂ, ಪ್ಲಾಸ್ಟಿಕ್ ಸಮಸ್ಯೆಯ ವಿರುದ್ಧ ಶ್ರದ್ಧೆಯಿಂದ ಹೋರಾಡುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಮತ್ತು ಐಟಿಸಿ ಫುಡ್ಸ್ ಸನ್‌ಫೀಸ್ಟ್ ಯಿಪ್ಪಿ ! #ಪ್ಲ್ಯಾಸ್ಟಿಕ್ ಬೇಕು ಉತ್ತಮ ಸಮಾಜ ನಿರ್ಮಾಣಕ್ಕೆ ಎಂಬ ಅಭಿಯಾನದ ಮೂಲಕ, ನಗರದಲ್ಲಿ ಸಂಗ್ರಹ ಡ್ರೈವ್‌ಗಳನ್ನು ಆಯೋಜಿಸಲಾಗಿದೆ. ಪ್ಲಾಸ್ಟಿಕ್‌ನ ಅತಿಯಾದ ಬಳಕೆಯಿಂದ ಉಂಟಾಗುವ ಮಾಲಿನ್ಯದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಡ್ರೈವ್‌ಗಳ ಹಿಂದಿನ ಉದ್ದೇಶವಾಗಿತ್ತು. ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ, ಪರಿಸ್ಥಿತಿಯನ್ನು ಉತ್ತಮ ರೀತಿಯಲ್ಲಿ ಎದುರಿಸಲು ಕಾರ್ಯಗತಗೊಳಿಸಬಹುದಾದ ವಿಧಾನಗಳನ್ನು ನಾಗರಿಕರಿಗೆ ತಿಳಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ. ರೇಡಿಯೊ ಸ್ಟೇಷನ್ ಇತ್ತೀಚೆಗೆ ಸಹಕಾರ ನಗರ, ಕನಕಪುರ ರಸ್ತೆಗಳಲ್ಲಿ ಕಸ ಸಂಗ್ರಹಿಸಿತು. ಈ ಅಭಿಯಾನದ ಮೂಲಕ, ವಾರಾಂತ್ಯದಲ್ಲಿ ಸಮೀಪದಲ್ಲಿ ನಿಲುಗಡೆ ಮಾಡಿದ 92.7 ಬಿಗ್ ಎಫ್‌ಎಂ ವಾಹನ ತೊಟ್ಟಿಗಳಲ್ಲಿ, ಬಳಸಿದ ಪ್ಲಾಸ್ಟಿಕ್ ಅನ್ನು ಹಾಕುವ ಮೂಲಕ ಇಲ್ಲಿನ ನಿವಾಸಿಗಳು ಬೆಂಬಲ ನೀಡುವಂತೆ ರೇಡಿಯೋ ಕೇಂದ್ರದ ವತಿಯಿಂದ ಕೇಳಿಕೊಂಡರು. ಕನಕಪುರ ರಸ್ತೆಯಲ್ಲಿ ವಾಸಿಸುವ ನಟಿ ಸಂಯುಕ್ತಾ ಹೊರನಾಡ್ ಅವರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಮತ್ತು ಸಮಾಜದ ಇತರ ಸದಸ್ಯರನ್ನು ತಮ್ಮ ಪ್ರೋತ್ಸಾಹಿಸುವಂತೆ ಕೇಳಿಕೊಳ್ಳುವ ಮೂಲಕ ಬೆಂಬಲ ನೀಡಿದರು. ಆರ್.ಜೆ.ಪ್ರದೀಪ ಈ ಬಗ್ಗೆ ಪ್ರತಿಕ್ರಿಯಿಸಿ, “ಬೆಂಗಳೂರು ಒಂದು ಸುಂದರವಾದ ನಗರ, ಆದರೆ ಪ್ಲಾಸ್ಟಿಕ್ ತ್ಯಾಜ್ಯವು ನಗರದಾದ್ಯಂತ ಭಾರಿ ಮಾಲಿನ್ಯವನ್ನು ಉಂಟುಮಾಡಿದೆ. ಪ್ಲಾಸ್ಟಿಕ್‌ನ ವಿಪರೀತ ಬಳಕೆಯಿಂದಾಗಿ ನಾವೆಲ್ಲರೂ ಇದೀಗ ಭಯಾನಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ‘ಬದಲಾವಣೆಯು ನಿಮ್ಮಿಂದ ಪ್ರಾರಂಭವಾಗುತ್ತದೆ’ ಎಂದು ಅವರು ಹೇಳುತ್ತಾರೆ ಮತ್ತು ಅದನ್ನು ನಾನು ಸರಳವಾಗಿ ಉಲ್ಲೇಖಿಸುವ ಬದಲು ಅದರ ಮೇಲೆ ಕಾರ್ಯನಿರ್ವಹಿಸುವ ಸಮಯ ಬಂದಿದೆ ಎಂದು ನಂಬುತ್ತೇನೆ. ಈ ಸಂಪೂರ್ಣ ಅಭಿಯಾನದ ಭಾಗವಾಗಲು ನನಗೆ ಸಂತೋಷವಾಗಿದೆ ಮತ್ತು ನಗರದ ಕಲ್ಯಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಇತರರನ್ನು ಪ್ರೋತ್ಸಾಹಿಸುವ ಪ್ರತಿ ಹಂತದಲ್ಲೂ ನನ್ನ ಅತ್ಯುತ್ತಮ ಪ್ರಯತ್ನಗಳನ್ನು ನೀಡುತ್ತೇನೆ“ ಎಂದರು. ಸಾರ್ವಜನಿಕರಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವುದರಿಂದ ಉಂಟಾಗುವ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು (ಬಿಎಲ್‌ಆರ್ ವಿಮಾನ ನಿಲ್ದಾಣ) ಮತ್ತು ಎಫ್‌ಎಂಸಿಜಿ ಪ್ರಮುಖ ಐಟಿಸಿಯ ಆಹಾರ ವಿಭಾಗ # ಪ್ಲ್ಯಾಸ್ಟಿಕ್ ಬೇಕು ಅಭಿಯಾನಕ್ಕೆ ಕೈ ಜೋಡಿಸಿದೆ. ಪ್ಲಾಸ್ಟಿಕ್‌ನ ಬಳಕೆ ‘ಕಡಿಮೆ ಮಾಡುವುದು ಮತ್ತು ಮರುಬಳಕೆ’ ಮಾಡುವ ಗುರಿಯನ್ನು ಹೊಂದಿದೆ ಮತ್ತು ಇದು ಉತ್ತಮ ಪ್ರಪಂಚ ನಿರ್ಮಾಣದತ್ತ ಮೊದಲ…

Read More