ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ರಾಕೆಟ್ ದಾಳಿ: ಇರಾನ್ ಸೇನಾಧಿಕಾರಿ ಸಹಿತ 8 ಮಂದಿ ಬಲಿ

ಬಾಗ್ದಾದ್, ಜ.3: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ವಾಯುದಾಳಿಯಲ್ಲಿ ಇರಾನ್‌ನ ಎಲೈಟ್ ಕ್ಯೂಡ್ಸ್ ಫೋರ್ಸ್ (ಇರಾನಿ ಸೇನೆ)ಯ ಮುಖ್ಯಸ್ಥ ಜನರನ್ ಖಾಸಿಂ ಸುಲೈಮಾನಿ ಮೃತಪಟ್ಟಿದ್ದಾರೆ ಎಂದು ಇರಾಕ್ ಅಧಿಕಾರಿಗಳು ಹೇಳಿದ್ದಾರೆ. ಉಗ್ರ ಸಂಘಟನೆಯಾದ ಪಾಪ್ಯುಲರ್ ಮೊಬಿಲೈಸೇಷನ್ ಫೋರ್ಸಸ್‌ನ ಉಪ ಕಮಾಂಡರ್ ಅಬು ಮೆಹದಿ ಅಲ್ ಮುಹಂದಿಸ್ ಕೂಡಾ ಹತ್ಯೆಗೀಡಾಗಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಬಾಗ್ದಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರಿ ಮಾಡಿ ನಡೆಸಿದ ಕ್ಷಿಪಣಿ ದಾಳಿಯಿಂದ ಏಳು ಮಂದಿ ಜೀವ ಕಳೆದುಕೊಂಡಿದ್ದಾರೆ. ಇದು ಅಮೆರಿಕದ ಕೃತ್ಯ ಎಂದು ಇರಾನ್ ಬೆಂಬಲಿತ ಅರೆಮಿಲಿಟರಿ ಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪಾಪ್ಯುಲರ್ ಮೊಬಿಲೈಸೇಷನ್ ಫೋಸರ್ಸ್ ಮೂಲಗಳ ಪ್ರಕಾರ, ವಿಮಾನ ನಿಲ್ದಾಣದ ಶಿಷ್ಟಾಚಾರ ಅಧಿಕಾರಿ ಮೊಹ್ಮದ್ ರೇಡಾ ಕೂಡಾ ಮೃತಪಟ್ಟವರಲ್ಲಿ ಸೇರಿದ್ದಾರೆ. ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಏಳು ಮಂದಿ ಬಲಿಯಾಗಿದ್ದು, ಇದು ವಾಯುದಾಳಿ ಎಂದು ಭದ್ರತಾ ಅಧಿಕಾರಿಗಳು…

Read More