ಕಪ್ಪು ಹಣ ಬಿಳಿ ಮಾಡಲು ಇಲ್ಲಿದೆ ಸರ್ಕಾರ ತೋರಿಸುವ ಸುರಕ್ಷಿತ ದಾರಿ

ಹೊಸದಿಲ್ಲಿ, ನ.26: ಅಧಿಕ ಮೌಲ್ಯದ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರದ ಬಳಿಕ ಇದೀಗ ಕಪ್ಪುಹಣ ಕೂಡಿಟ್ಟವರಿಗೆ ಶುಭ ಸುದ್ದಿ ಕೇಂದ್ರ ಸರ್ಕಾರದಿಂದ ಬಂದಿದೆ. ನಾಗರಿಕರು 2.5 ಲಕ್ಷ ರೂಪಾಯಿಗಿಂತ ಹೆಚ್ಚು ನಗದು ಹೊಂದಿದ್ದರೆ, ಶೇ.60ರಷ್ಟು ದಂಡ ಪಾವತಿಸಿ, ಅದನ್ನು ಬಿಳಿ ಹಣವಾಗಿ ಪರಿವರ್ತಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಸ್ವಯಂಪ್ರೇರಿತರಾಗಿ ಈ ಕ್ರಮಕ್ಕೆ ಮುಂದಾಗದೇ ತೆರಿಗೆ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೆ, ಅಂಥವರನ್ನು ಪತ್ತೆ ಮಾಡಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಸ್ವಯಂಪ್ರೇರಿತರಾಗಿ 2.5 ಲಕ್ಷಕ್ಕಿಂತ ಅಧಿಕ ನಗದು ದಾಸ್ತಾನು ಇರುವುದನ್ನು ಒಪ್ಪಿಕೊಳ್ಳುವ ಜನರು ಶೇಕಡ 60ರಷ್ಟು ದಂಡ ತೆರಬೇಕಾಗುತ್ತದೆ. ಆಗ ಅವರ ಇತರ ಹಣ ಬಿಳಿಯಾಗುತ್ತದೆ. ಚಿನ್ನ, ಭೂ ವ್ಯವಹಾರ ಅಥವಾ ವಿದೇಶಿ ಖಾತೆಗಳಲ್ಲಿ ಹಾಕುವ ವಾಮಮಾರ್ಗದ ಬದಲು ಪರ್ಯಾಯವಾದ ಕಾನೂನುಬದ್ಧ ಮಾರ್ಗವನ್ನು ಈ ಮೂಲಕ ಕೇಂದ್ರ ತೋರಿಸಿಕೊಟ್ಟಿದೆ. ಈಗ ಅಧಿಕ ಆದಾಯದವರಿಗೆ ವಿಧಿಸಲಾಗುವ ಶೇಕಡ 33.9ಕ್ಕಿಂತ ಅಧಿಕ ದರದ…

Read More