ಲಾಲ್ ಸಲಾಂ ಕಾಮ್ರೇಡ್ ಫಿಡೆಲ್ ಕ್ಯಾಸ್ಟ್ರೊ-ಸನತ್‌ಕುಮಾರ್ ಬೆಳಗಲಿ

  ಸಹೋದರ ರೌಲ್ ಕ್ಯಾಸ್ಟ್ರೊ ಮತ್ತು ಕ್ರಾಂತಿಕಾರಿ ಸ್ನೇಹಿತ ಚೆ ಗುವೇರಾ ಜೊತೆ ಸೇರಿಕೊಂಡು ಗೆರಿಲ್ಲಾ ಯುದ್ಧ ನಡೆಸಿದ್ದ ಕ್ಯಾಸ್ಟ್ರೊ ಕ್ಯೂಬಾ ದೇಶಕ್ಕೆ ಹೊಸಜೀವ ನೀಡುವಲ್ಲಿ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಬ್ಯಾಟಿಸ್ಟಾ ಎಂಬ ಸರ್ವಾಧಿಕಾರಿಯಿಂದ ದೇಶವನ್ನು ಮುಕ್ತಗೊಳಿಸುವುದು ಅಲ್ಲದೇ ಅಮೆರಿಕದ ಕರಿ ನೆರಳಿನಿಂದ ದೇಶವನ್ನು ಪಾರು ಮಾಡುವುದು ಅವರ ಪಾಲಿಗೆ ದೊಡ್ಡ ಸವಾಲಾಗಿತ್ತು. ಹೋರಾಟದ ಹಾದಿಯ ಕೆಲ ಹಂತಗಳಲ್ಲಿ ಅವರು ವಿಫಲರಾದರೂ ಎಂದಿಗೂ ನಿರಾಸೆಗೊಳ್ಳಲಿಲ್ಲ. ಕ್ರಾಂತಿಕಾರಿ ಚಳವಳಿಯ ಸ್ವರೂಪ ಹೇಗಿರಬೇಕು ಮತ್ತು ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಹೇಗೆ ಯಶಸ್ವಿಯಾಗಬೇಕು ಎಂಬುದಕ್ಕೆ ಮಾರ್ಗದರ್ಶನ ನೀಡಿದ್ದು ಅಲ್ಲದೇ ಅದನ್ನು ಬದ್ಧತೆಯಿಂದ ಕಾರ್ಯರೂಪಕ್ಕೆ ತಂದ ಕಮ್ಯುನಿಸ್ಟ್ ನೇತಾರ ಫಿಡೆಲ್ ಕ್ಯಾಸ್ಟ್ರೊ ಹೋರಾಟದ ಬದುಕಿಗೆ ವಿದಾಯ ಹೇಳಿದ್ದಾರೆ. ಜೀವನದ ಕಟ್ಟಕಡೆಯ ಕ್ಷಣದವರೆಗೂ ಚಳವಳಿಯನ್ನೇ ಉಸಿರಾಗಿಸಿಕೊಂಡಿದ್ದ ಕ್ಯಾಸ್ಟ್ರೊ ಕಮ್ಯುನಿಸ್ಟ್ ನಾಯಕ ಮಾತ್ರ ಆಗಿರಲಿಲ್ಲ. ಅವರೊಬ್ಬ ಒಬ್ಬ ದೇಶಾಭಿಮಾನಿ, ಅದ್ಭುತ ಚಿಂತಕ, ಜೀವಪರ ಕಾಳಜಿಯುಳ್ಳ ವ್ಯಕ್ತಿ…

Read More