ಭಯೋತ್ಪಾದನೆ ಆರೋಪ : ಸೌದಿಯಲ್ಲಿ ಬಂಧಿತರಾಗಿರುವ 823 ವಿದೇಶೀಯರಲ್ಲಿ 19 ಮಂದಿ ಭಾರತೀಯರು

: ಭಯೋತ್ಪಾದನೆಯ ಆರೋಪದ ಮೇಲೆ ಸೌದಿಯಲ್ಲಿ ಬಂಧಿತರಾಗಿರುವ 823 ವಿದೇಶೀಯರಲ್ಲಿ 19 ಮಂದಿ ಭಾರತೀಯರು ಸೇರಿದ್ದಾರೆ. ಉಳಿದವರಲ್ಲಿ 29 ಮಂದಿ ಪಾಕಿಸ್ತಾನೀಯರು ಹಾಗೂ 8 ಮಂದಿ ಅಮೇರಿಕನ್ನರು, ಮೂವರು ಯುರೋಪಿಯನ್ನರು, ಇಬ್ಬರು ಇಂಡೋನೇಷ್ಯ ನಾಗರಿಕರು, 6 ಮಂದಿ ಫಿಲಿಪ್ಪೀನೀಯರು ಹಾಗೂ 18 ಮಂದಿ ಆಫ್ರಿಕನ್ನರು ಸೇರಿದ್ದಾರೆ. ಸೌದಿ ಜೈಲುಗಳಲ್ಲಿ ಕೊಳೆಯುತ್ತಿರುವ 4,409 ಸೌದಿ ನಾಗರಿಕರೊಂದಿಗೆ ಈ ವಿದೇಶೀಯರೂ ಈಗ ಸೇರಿಕೊಂಡಿದ್ದಾರೆ. ಉಗ್ರವಾದ ಆರೋಪದ ಮೇಲೆ ಬಂಧಿತರಾಗಿರುವ ಕೆಲವು ವಿದೇಶೀಯರು ಅಪರಾಧಿಗಳೆಂದು ನ್ಯಾಯಾಲಯದಿಂದ ತೀರ್ಪು ಬಂದಿದ್ದರೆ, ಇನ್ನುಳಿದವರು ವಿಚಾರಣೆಯೆದುರಿಸುತ್ತಿದ್ದಾರೆ. ‘‘ಉಗ್ರ ಸಂಘಟನೆಗಳಿಗೆ ಹಣ ವರ್ಗಾವಣೆ ಮಾಡಲು ಉಪಯೋಗಿಸಲಾಗುತ್ತಿದ್ದ 117 ಬ್ಯಾಂಕ್ ಖಾತೆಗಳನ್ನು ಸೌದಿ ಸರಕಾರಮುಟ್ಟುಗೋಲು ಹಾಕಿದೆ ಹಾಗೂ ಚ್ಯಾರಿಟೇಬಲ್ ಸಂಸ್ಥೆಗಳ ನಿಧಿಗಳನ್ನು ಉಗ್ರವಾದ ಸಂಘಟನೆಗಳಿಗೆ ದುರುಪಯೋಗ ಪಡಿಸುವುದನ್ನು ತಡೆಯಲು ಸರಕಾರ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದೆ,’’ಎಂದು ಆಂತರಿಕ ಸಚಿವಾಲಯದ ವಕ್ತಾರ ಮೇಜರ್ ಜನರಲ್ ಮನ್ಸೌರ್ ಅಲ್-ತುರ್ಕಿ ಕಾನ್ಫರೆನ್ಸ್ ಕಾಲ್ ಮೂಲಕ…

Read More