‘ಸೆಕ್ಸ್’ ಆಮಿಷವೊಡ್ಡಿ ಪೌರತ್ವ ಕಾಯ್ದೆಯ ‘ಬೆಂಬಲಿಗರ’ ಸಂಖ್ಯೆ ಹೆಚ್ಚಿಸಲು ಬಿಜೆಪಿ ಬೆಂಬಲಿಗರ ಯತ್ನ !

‘ನೆಟ್ ಫ್ಲಿಕ್ಸ್’ ಟ್ವೀಟ್ ಮಾಡಿ ಹೇಳಿದ್ದೇನು ಗೊತ್ತಾ? ದೇಶಾದ್ಯಂತ ಪೌರತ್ವ ಕಾಯ್ದೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ ಬಿಜೆಪಿಯು ಪೌರತ್ವ ಕಾಯ್ದೆಯನ್ನು ಬೆಂಬಲಿಸಲು 8866288662 ನಂಬರ್ ಗೆ ಮಿಸ್ ಕಾಲ್ ನೀಡುವ ಆಂದೋಲನವೊಂದನ್ನು ಆರಂಭಿಸಿದೆ. ಈ ಸಂಖ್ಯೆಗೆ ಕರೆ ಮಾಡಿ ಸಿಎಎ ಕಾಯ್ದೆಯನ್ನು ಬೆಂಬಲಿಸಿ ಎಂದು ಬಿಜೆಪಿ ಹೇಳಿದೆ. ಆದರೆ ಈ ಆಂದೋಲನ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಚಾರ ಪಡೆಯಲು ಮತ್ತು ಮಿಸ್ ಕಾಲ್ ಗಳ ಸಂಖ್ಯೆಗಳನ್ನು ಹೆಚ್ಚಿಸಲು ಬಿಜೆಪಿ ಬೆಂಬಲಿಗರು ನಡೆಸಿರುವ ವಿಚಿತ್ರ ಪ್ರಯತ್ನಗಳು ಭಾರೀ ವಿವಾದಕ್ಕೊಳಗಾಗಿದೆ. ಈಗಾಗಲೇ ಬಿಜೆಪಿ ಬೆಂಬಲಿಗರು ‘ಉಚಿತ ನೆಟ್ ಫ್ಲಿಕ್ಸ್ ಸಬ್ ಸ್ಕ್ರಿಪ್ಶನ್ ಪಡೆಯಲು’, ‘ಉದ್ಯೋಗಕ್ಕಾಗಿ’ ಮತ್ತು ‘ಫೋನ್ ಸೆಕ್ಸ್ ಆಪರೇಟರ್ ಗಳಿಗಾಗಿ’ ಎಂದೆಲ್ಲಾ ಬರೆದು ಬಿಜೆಪಿ ನೀಡಿರುವ ನಂಬರನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನೂ ದಾರಿ ತಪ್ಪಿಸುತ್ತಿದ್ದಾರೆ. ಆದರೆ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಕೆಲವು ಖಾತೆಗಳು…

Read More