ಮತ್ತೆ ದೇಶ ವಿಭಜನೆಯ ಗಂಡಾಂತರ-ಸನತ್ ಕುಮಾರ್ ಬೆಳಗಲಿ

ಸಂವಿಧಾನ ವಿರೋಧಿಯಾದ ಈ ಪೌರತ್ವ ತಿದ್ದುಪಡಿ ಮಸೂದೆ ಸದ್ಯಕ್ಕೆ ಮುಸ್ಲಿಮರಿಗೆ ಗಂಡಾಂತರಕಾರಿಯಾಗಿದ್ದರೂ ಮುಂದಿನ ದಿನಗಳಲ್ಲಿ ಇತರ ದಲಿತ, ಹಿಂದುಳಿದ, ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳಿಗೆ ಇದು ಕಂಟಕಕಾರಿಯಾಗಲಿದೆ. ಮಹಿಳೆಯರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡುವ ಹುನ್ನಾರವಿದೆ. ಅಂತಿಮವಾಗಿ ಭಾರತದ ಏಕತೆ, ಸಮಗ್ರತೆಗೆ ಇದು ಅಪಾಯಕಾರಿಯಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆದ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ದೇಶದ ಬಹುತೇಕ ಕಡೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ಜನ ಬಂಡಾಯವನ್ನು ಹತ್ತಿಕ್ಕಲು ಅಸ್ಸಾಂ, ತ್ರಿಪುರಾಗಳಿಗೆ ಅರೆ ಸೇನಾ ಪಡೆಗಳನ್ನು ಕರೆಸಲಾಗಿದೆ. ಈಶಾನ್ಯ ಭಾರತದ ಬಹುತೇಕ ಕಡೆ ಕರ್ಫ್ಯೂ ಹೇರಲಾಗಿದೆ. ಕಾಶ್ಮೀರದಲ್ಲಿ ಮಾಡಿದಂತೆ ಇಲ್ಲೂ ಇಂಟರ್‌ನೆಟ್ ನಿಷೇಧಿಸಲಾಗಿದೆ. ಇದನ್ನು ಒಕ್ಕೊರಲಿನಿಂದ ವಿರೋಧಿಸಬೇಕಾಗಿದ್ದ ಪ್ರತಿಪಕ್ಷಗಳು ಇಬ್ಭಾಗವಾಗಿವೆ. ಸಂಯುಕ್ತ ಜನತಾದಳ, ಅಣ್ಣಾ ಡಿಎಂಕೆ, ತೆಲುಗುದೇಶಂ, ಪಾಸ್ವಾನರ ಎಲ್‌ಜೆಪಿ, ಅಠಾವಳೆಯ ಆರ್‌ಪಿಐ ಮುಂತಾದ ಪಕ್ಷಗಳು ಈ ಫ್ಯಾಶಿಸ್ಟ್…

Read More