ವಿವಾದವೇ ಅಲ್ಲದ ವಿವಾದ

 – ಸನತ್‌ಕುಮಾರ ಬೆಳಗಲಿ ಅನಂತಮೂರ್ತಿ ಅವರು ಆಡುವ ಪ್ರತಿಯೊಂದು ಮಾತೂ ಯಾಕೆ ವಿವಾದದ ಅಲೆಯನ್ನೆಬ್ಬಿಸುತ್ತದೆ. ಹಾಗೆ ನೋಡಿದರೆ ಅವರ ‘ಸಂಸ್ಕಾರ’ವನ್ನು ಹೊರತುಪಡಿಸಿ ಯಾವ ಕೃತಿಯೂ ವಿವಾದಕ್ಕೆ ಕಾರಣವಾಗಿಲ್ಲ. ಆದರೆ ಅವರ ಭಾಷಣಗಳು, ಅನಿಸಿಕೆಗಳು ಮಾತ್ರ ಬಲಪಂಥೀಯ ಫ್ಯಾಸಿಸ್ಟರ ಆಕ್ರೋಶಕ್ಕೆ ಗುರಿಯಾಗುತ್ತಲೇ ಇವೆ. ಎಪ್ಪತ್ತರ ದಶಕದಲ್ಲಿ ಅವರು ಬರೆದ ‘ಸಂಸ್ಕಾರ’ದ ಬಗ್ಗೆ ಆಗ ನಮ್ಮ ಬಿಜಾಪುರ ಜಿಲ್ಲೆಯ ಮಾಧ್ವ ಬ್ರಾಹ್ಮಣರಲ್ಲಿ ಕೆಲವರು ಅವರ ವಿರುದ್ಧ ಕೆಂಡಕಾರುತ್ತಿದ್ದರು. ಅಂತಲೇ ಕುತೂಹಲದಿಂದ ಅದನ್ನು ಧಾರವಾಡದಿಂದ ತರಿಸಿ ಓದಿದ ನಾನು ಅವರ ಬರವಣಿಗೆ ಬಗ್ಗೆ ತುಂಬ ಪ್ರಭಾವಿತನಾಗಿದ್ದೆ. ಹಾಗೆ ನೋಡಿದರೆ ಅನಂತಮೂರ್ತಿ ಆಡುವ ಮಾತಿನಲ್ಲಿ ವಿವಾದ ಎಂಬುದಿರುವುದಿಲ್ಲ. ಅವರು ಎಸೆಯುವ ಕಲ್ಲು ಸರಿಯಾದ ದಿಕ್ಕಿನಲ್ಲಿ ಹೋಗುತ್ತದೆ. ಆದರೆ ಬೊಗಳುವ ಹುಚ್ಚು ನಾಯಿಗಳು ಇದರಿಂದ ಕೆರಳುತ್ತವೆ. ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಸಂಪುಟದಲ್ಲಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪ ಕನ್ನಡ ಸಾಹಿತ್ಯವನ್ನು ಭೂಸಾ ಸಾಹಿತ್ಯವೆಂದು ಟೀಕಿಸಿದ್ದರು. ಜನಪರವಲ್ಲದ…

Read More