ಅಣ್ಣಾ ಚಳವಳಿಯ ರಾಜಕೀಯ ಲಾಭ ಬಿಜೆಪಿಗೆ- ಸನತ್‌ ಕುಮಾರ್‌ ಬೆಳಗಲಿ

ಅಣ್ಣಾ ಹಝಾರೆ ಗೆಲುವಿನ ಬಾವುಟ ಹಾರಿಸಿದ್ದಾರೆ. ಜನಲೋಕಪಾಲ ಮಸೂದೆಯ ಮೂರು ವಿವಾದಾತ್ಮಕ ಅಂಶಗಳಿಗೆ ಸಂಸತ್ತು ಸಮ್ಮತಿ ನೀಡಿದೆ. ಪಕ್ಷಭೇದ ಮರೆತು ಎಲ್ಲ ಸದಸ್ಯರು ಒಮ್ಮತದ ನಿಲುವು ತಾಳಿದ್ದಾರೆ. ಈ ವಿಧೇಯಕ ಕಾನೂನು ರೂಪ ಪಡೆದು ಜನಲೋಕಪಾಲ ಅಸ್ತಿತ್ವಕ್ಕೆ ಬಂದ ನಂತರ ದೇಶದಲ್ಲಿ ಭ್ರಷ್ಟಾಚಾರ ಸಂಪೂರ್ಣವಾಗಿ ತೊಲಗಿ ಹೋಗುತ್ತದೆ ಎಂಬ ಭ್ರಮೆ ಯಾರಿಗೂ ಇಲ್ಲ. ಸ್ವತಃ ಅಣ್ಣಾ ಹಝಾರೆ ಯವರಿಗೂ ಇಲ್ಲ. ಲಂಚ ಪಡೆಯುವಾಗ ಸಿಕ್ಕಿ ಬೀಳುವ ಸರಕಾರಿ ನೌಕರರನ್ನು, ರಾಜಕಾರಣಿ ಗಳನ್ನು ಶಿಕ್ಷಿಸುವುದಕ್ಕೆ ಮಾತ್ರ ಇದರಿಂದ ಸಾಧ್ಯವಾಗುತ್ತದೆ. ಯಾರ ಕಣ್ಣಿಗೂ ಕಾಣದೇ ನಡೆ ಯುವ ಭ್ರಷ್ಟಾಚಾರ ಎಂದಿನಂತೆ ಮುಂದುವರಿ ಯುತ್ತದೆ.ಈ ಹೋರಾಟದ ಪರಿಣಾಮವಾಗಿ ಇಡೀ ದೇಶದಲ್ಲಿ, ಅದರಲ್ಲೂ ಮಧ್ಯಮವರ್ಗದಲ್ಲಿ ಜಾಗೃತಿ ಮೂಡಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದರಿಂದ ಭ್ರಷ್ಟಾಚಾರ ತೊಲಗುತ್ತದೋ, ಬಿಡುತ್ತದೋ… ಆದರೆ ರಾಜಕೀಯವಾಗಿ ಬಿಜೆಪಿಗೆ ಅನುಕೂಲವಾಗುತ್ತದೆ ಎಂಬುದು ಮಾತ್ರ ನೂರಕ್ಕೆ ನೂರರಷ್ಟು ಸತ್ಯ. ಅಣ್ಣಾ…

Read More