ಈ ಮೀಸಲಾತಿಗೆ ಅಪಸ್ವರವೇಕೆ? – ಸನತ್‌ಕುಮಾರ ಬೆಳಗಲಿ

ಮತಾಂತರ ಮತ್ತು ದನ ಹತ್ಯೆ ನಿಷೇಧದ ಜೊತೆಗೆ ಸಂಘಪರಿವಾರಕ್ಕೆ ಈಗ ಇನ್ನೊಂದು ಅಸ್ತ್ರ ದೊರೆಕಿದೆ. ಇತರ ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4.5ರಷ್ಟು ಒಳಮೀಸಲು ನಿಗದಿ ಮಾಡಿರುವ ಕೇಂದ್ರ ಸರಕಾರದ ತೀರ್ಮಾನವೇ ಕೋಮುವಾದಿಗಳಿಗೆ ದೊರೆತ ಹೊಸ ಅಸ್ತ್ರ. ಇದನ್ನೇ ರಾಜಕೀಯ ಬಂಡವಾಳ ಮಾಡಿಕೊಂಡು ಮುಂಬರುವ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕೋಮು ಧ್ರುವೀಕರಣ ಉಂಟು ಮಾಡಿ, ಹಿಂದೂ ವೋಟ್‌ಬ್ಯಾಂಕ್ ನಿರ್ಮಿಸಲು ಈ ವಿಭಜನಕಾರಿ ಶಕ್ತಿಗಳು ಷಡ್ಯಂತ್ರ ರೂಪಿಸಿವೆ. ಬರಲಿರುವ ದಿನಗಳಲ್ಲಿ ಹಳ್ಳಿಹಳ್ಳಿಗಳಲ್ಲಿ ಭಾರತೀಯರನ್ನು ಕೋಮು ಆಧಾರದಲ್ಲಿ ಒಡೆದು ಈ ಒಡಕನ್ನೇ ಮೆಟ್ಟಿಲು ಮಾಡಿಕೊಂಡು ಚುನಾವಣೆಯನ್ನು ಗೆಲ್ಲಲು ಮಸಲತ್ತು ನಡೆದಿದೆ.‘ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಿದರೆ, ದೇಶದಲ್ಲಿ ಯಾದವೀ ಕಲಹಕ್ಕೆ ದಾರಿಯಾಗುತ್ತದೆ’ ಎಂದು ಬಿಜೆಪಿ ಈಗಾಗಲೇ ಎಚ್ಚರಿಕೆ ನೀಡಿದೆ. ಇಂತಹ ಸಂದರ್ಭದಲ್ಲಿ ಹಿಂದುಳಿದ ವರ್ಗಗಳನ್ನು ವಿಭಜಿಸಲು ಸಂಘಪರಿವಾರ ತನ್ನದೇ ಸಂಸ್ಥೆಗಳನ್ನು ಕಟ್ಟಿಕೊಂಡಿದೆ. ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ…

Read More