ಈ ಕಿತ್ತಾಟಕ್ಕೆ ಏನು ಅರ್ಥವಿದೆ?

– ಸನತ್ ಕುಮಾರ ಬೆಳಗಲಿ ಮೂಲಭೂತವಾದ ಬರೀ ಧರ್ಮಕ್ಕೆ ಸೀಮಿತವಾಗಿರುವುದಿಲ್ಲ. ಜಾತಿ, ಭಾಷೆ, ಪ್ರದೇಶ, ಸಿದ್ಧಾಂತ ಮತ್ತು ಸಂಘಟನೆಗಳ ಬಗೆಗಿನ ಅತಿರೇಕದ ಪ್ರೇಮ ಮನುಷ್ಯನ ವಿವೇಚನಾ ಶಕ್ತಿಯನ್ನು ಕುಂಠಿತಗೊಳಿಸಿ, ಅಸಹನೆಯ ಅಂಧಕಾರದ ಕೂಪಕ್ಕೆ ನೂಕುತ್ತದೆ. ಅನೇಕ ಬಾರಿ ಮಹಾಪುರುಷರ ಹೆಸರಿನಲ್ಲಿ ಇಂತಹ ಅವಿವೇಕದ ಕೃತ್ಯಗಳು ನಡೆಯುತ್ತವೆ. ಇತ್ತೀಚೆಗೆ ಪುಣೆಯಲ್ಲಿ ಶಿವಾಜಿ ಚಿತ್ರವನ್ನು ತಿರುಚಿ ಪ್ರಕಟಿಸ ಲಾಗಿದೆಯೆಂದು ಮೂಲಭೂತವಾದಿಗಳು ಸಾದಿಕ್ ಎಂಬ ಯುವಕನ ಹತ್ಯೆ ಮಾಡಿದರು. ಶಿವಾಜಿಯೇನು ಇವರ ಕನಸಿನಲ್ಲಿ ಬಂದು ಈ ರೀತಿ ಮಾಡುವಂತೆ ಹೇಳಿದ್ದನೇ? ಶಿವಾಜಿ ಬಗ್ಗೆ ತಿಳಿದುಕೊಂಡವರ್ಯಾರೂ ಈ ರೀತಿ ಮಾಡುವುದಿಲ್ಲ. ತನ್ನ ಸೇನಾಪಡೆಯಲ್ಲಿ ಮುಸ್ಲಿಂ ಸೇನಾಧಿಕಾರಿಗಳನ್ನು ನೇಮಿಸಿ ಕೊಂಡಿದ್ದ ಛತ್ರಪತಿಯನ್ನು ಮುಸ್ಲಿಂ ವಿರೋಧಿಯೆಂದು ಬಿಂಬಿಸಿ, ರಾಜಕೀಯ ಲಾಭ ಮಾಡಿಕೊಳ್ಳುವ ಹುನ್ನಾರ ನಡೆದಿದೆ. ಪುಣೆಯ ಘಟನೆ ಹಾಳಾಗಿ ಹೋಗಲಿ, ನಮ್ಮ ಕರ್ನಾಟಕ ದಲ್ಲೂ ಇತ್ತೀಚೆಗೆ ಅಸಹನೆಯ ಪ್ರವೃತ್ತಿ ಹೆಚ್ಚುತ್ತಿದೆ. ಕರಾವಳಿಯಲ್ಲಿ ನಕಲಿ ಧರ್ಮ ರಕ್ಷಕರ…

Read More