ಯಾವುದು ದೇಶದ್ರೋಹ, ಯಾವುದು ದೇಶಪ್ರೇಮ?-ಸುರೇಶ್ ಭಟ್, ಬಾಕ್ರಬೈಲ್

ಮಾನವ ಹಕ್ಕುಗಳ ಸಂಸ್ಥೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಇತ್ತೀಚೆಗೆ ‘ಕಾಶ್ಮೀರದ ಒಡೆದುಹೋದ ಕುಟುಂಬಗಳು’ ಎಂಬ ವಿಷಯದ ಮೇಲೆ ಬೆಂಗಳೂರಿನ ಕಾಲೇಜೊಂದರಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ‘ಆಝಾದಿ’ಯ ಪರ ಮತ್ತು ಸೇನೆಯ ವಿರುದ್ಧ ಘೋಷಣೆಗಳು ಕೇಳಿಬಂದವೆಂದು ಹೇಳಿರುವ ಸಂಘ ಪರಿವಾರ ಆಮ್ನೆಸ್ಟಿ ಸಂಸ್ಥೆಯ ಮೇಲೆ ದೇಶದ್ರೋಹದ ಆರೋಪ ಹೊರಿಸಿದೆ. ಕ್ಷಣಮಾತ್ರದಲ್ಲಿ ಐಪಿಸಿ 124-ಎ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ ಪೊಲೀಸರು ಇವರ ಒತ್ತಡಕ್ಕೆ ಮಣಿದಿರುವ ಹಾಗಿದೆೆ. ಆದರೆ ಇಷ್ಟರಿಂದಲೇ ತೃಪ್ತಿಯಾಗದ ಸಂಘಪರಿವಾರ ರಾಜ್ಯದಾದ್ಯಂತ ಸರಣಿಯೋಪಾದಿಯಲ್ಲಿ ಪ್ರತಿಭಟನೆ, ಜಾಥಾ, ಧರಣಿ ಇತ್ಯಾದಿಗಳನ್ನು ನಡೆಸುತ್ತಾ ಗಂಟಲು ಹರಿಯುವ ಹಾಗೆ ಕಿರುಚಾಡುತ್ತಿದೆ. ಹಾಗಾದರೆ ಭಾರತದ ಸರ್ವೋಚ್ಚ ನ್ಯಾಯಾಲಯ ಸೇರಿದಂತೆ ಹಲವಾರು ನ್ಯಾಯಾಲಯಗಳು ಈಗಾಗಲೇ ಭಾಷಣ, ಘೋಷಣೆಗಳು ಹಿಂಸೆ, ದೊಂಬಿಗೆ ಪ್ರಚೋದನೆ ನೀಡಿದಾಗಲಷ್ಟೆ ಐಪಿಸಿ 124-ಎ ಅಡಿಯಲ್ಲಿ ದೇಶದ್ರೋಹದ ದೂರು ದಾಖಲಿಸಬಹುದು ಎಂದು ಮತ್ತೆ ಮತ್ತೆ ಹೇಳಿರುವುದಕ್ಕೆ ಯಾವ ಬೆಲೆಯೂ ಇಲ್ಲವೇ? ಇದಕ್ಕೆ ಮುನ್ನ ಇದೇ ಸಂಘಪರಿವಾರ…

Read More