ಈ ಮುಸ್ಲಿಂ ವಿರೋಧಿ ರೋಗಕ್ಕೆ ಮದ್ದು ಎಲ್ಲಿದೆ?

 – ಸನತ್‌ಕುಮಾರ ಬೆಳಗಲಿ ರಾಜಧಾನಿ ಬೆಂಗಳೂರಿನ ಜನಸಂಖ್ಯೆ ಈಗ ಒಂದು ಕೋಟಿಗೆ ತಲುಪಿದೆ. ಭಾರತದ ಎಲ್ಲ ರಾಜ್ಯಗಳ ಜನ ಇಲ್ಲಿ ಆಸರೆ ಪಡೆದಿದ್ದಾರೆ. ಎಲ್ಲ ಜಾತಿ, ಧರ್ಮ, ಭಾಷೆಗಳು ನೆಲೆಸಿದ ಸರ್ವಜನಾಂಗದ ಶಾಂತಿಯ ತೋಟವಿದು. ಅಕ್ಷರಶಃ ಇದೀಗ ಕಾಸ್ಮೋಪಾಲಿಟಿನ್ ನಗರ ವಾಗಿ ಮಾರ್ಪಟ್ಟಿದೆ. ವಲಸೆ ಪ್ರಮಾಣ ಹೆಚ್ಚುತ್ತಿದ್ದಂತೆ ಮೂಲಭೂತ ಸೌಕರ್ಯಗಳ ಕೊರತೆಯೂ ಎದ್ದು ಕಾಣುತ್ತಿದೆ. ಈ ಕೊರತೆ ಯನ್ನು ಹೇಗೋ ನಿವಾರಿಸಬಹುದು. ಆದರೆ ಹೃದಯವಂತಿಕೆಯ ಕೊರತೆಯನ್ನು ಹೇಗೆ ನೀಗಿಸಲು ಸಾಧ್ಯ? ಈ ನಗರ ಬೆಳೆದಂತೆ ಇಲ್ಲಿ ನೆಲೆಸಿದವರ ಮನಸ್ಸು ವಿಶಾಲವಾಗಬೇಕಿತ್ತು. ಸಂಕುಚಿತ ಜಾತಿ ಮತದ ಕೂಪದಿಂದ ಜನ ಹೊರಬೇಕಾಗಿತ್ತು. ಆದರೆ ನೋವಿನ ಸಂಗತಿ ಯೆಂದರೆ ಭೌತಿಕವಾಗಿ ಬೆಳೆದ ಬೆಂಗಳೂರಿಗರ ಮನಸ್ಸು ಕಂದಾಚಾರದ ಕೂಪದಲ್ಲಿ ಕೊಳೆತು ಹೋಗುತ್ತಿದೆ. ಮೊನ್ನೆ ನಾನು ಬೆಳಗಿನ ವಾಯು ವಿಹಾರಕ್ಕೆ ಹೊರಟಾಗ ದಾರಿ ಬದಿಯ ವಿದ್ಯುತ್ ಕಂಬಕ್ಕೆ ತೂಗು ಹಾಕಿದ್ದ ಭಿತ್ತಿಫಲಕವೊಂದನ್ನು ನೋಡಿ ಬೆವೆತು…

Read More