ನಲವತ್ತೇಳರ ಸ್ವಾತಂತ್ರ್ಯದ ದುರ್ಗತಿ — ಸನತ್‌ ಕುಮಾರ ಬೆಳಗಲಿ

‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತೃಯ’ ಎಂಬ ಕವಿ ಸಿದ್ದಲಿಂಗಯ್ಯನವರ ಹಾಡು ಮತ್ತೆ ನೆನಪಿಗೆ ಬರುತ್ತಿದೆ. ಪ್ರತಿ ಬಾರಿ ಆಗಸ್ಟ್ 15 ಬಂದಾಗಲೇ ದಿಢೀರನೆ ರಾಷ್ಟ್ರಪ್ರೇಮ ಉಕ್ಕುತ್ತದೆ. ಈಗಂತೂ ಬೀದಿ ಬೀದಿಯಲ್ಲಿ ರಾಷ್ಟ್ರಧ್ವಜಗಳು ವಿಜೃಂಭಿಸುತ್ತವೆ. 31 ವರ್ಷಗಳ ಹಿಂದೆ ಈ ಕವಿತೆ ಬರೆದಾಗ ಸಿದ್ದಲಿಂಗಯ್ಯ ಇನ್ನೂ ವಿದ್ಯಾರ್ಥಿ. ಆಗ ದಲಿತ ಸಂಘರ್ಷ ಸಮಿತಿ ಇನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲ. ಸಿಪಿಐನ ವಿದ್ಯಾರ್ಥಿ ಸಂಘಟನೆಯಲ್ಲಿ ಈ ಕವಿಯನ್ನು ನೋಡಿದ ನೆನಪು. ಮುಂದೆ ದಾವಣಗೆರೆಯಲ್ಲಿ 1976ರಲ್ಲಿ ನಡೆದ ಪ್ರಗತಿಪಂಥ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ದಲಿಂಗಯ್ಯ ತಮ್ಮ ಮೊದಲ ಕವನ ಸಂಕಲನ ‘ಹೊಲೆಮಾದಿಗರ ಹಾಡು’ ತೆಗೆದುಕೊಂಡು ಬಂದಿದ್ದರು. ಅಲ್ಲಿ ಕಟ್ಟಿಮನಿ, ನಿರಂಜನ ಈ ಸಂಕಲನ ಓದಿ ಅಭಿಮಾನದಿಂದ ಮಾತಾಡಿದ್ದರು. ಯಾರಿಗೆ ಬಂತು ಎಲ್ಲಿಗೆ ಬಂತು ಎಂದು ಕೇಳುತ್ತಲೇ ನಲವತ್ತೇಳರ ಸ್ವಾತಂತ್ರ ಟಾಟಾ -ಬಿರ್ಲಾರ ಜೇಬಿಗೆ ಬಂತು, ಜಮೀನುದಾರರ ಜಗಲಿಗೆ ಬಂತು’’ ಎಂದು ಈ…

Read More