ಇದು ಸಿದ್ದೀಕಿ ಪ್ರಶ್ನೆ ಮಾತ್ರವಲ್ಲ

ಸನತ್ ಕುಮಾರ್ ಬೆಳಗಲಿ– ‘‘ನಾನು ಮುಸಲ್ಮಾನನಾಗಿರದಿದ್ದರೆ ಪೊಲೀಸರು ನನ್ನನ್ನು ಬಂಧಿಸುತ್ತಿದ್ದರಾ? ಮುಸಲ್ಮಾನನಾಗಿ ಹುಟ್ಟಿದ ತಪ್ಪಿಗೆ ಭಯೋತ್ಪಾದನಾ ಸಂಚಿನಲ್ಲಿ ನನ್ನನ್ನು ಸಿಲುಕಿಸಿದವರಲ್ಲವೇ?’’ ಇದು ಆರೋಪ ಸಾಬೀತಾಗದೆ ಜೈಲಿನಿಂದ ಬಿಡುಗಡೆಯಾಗಿ ಬಂದಿರುವ ಯುವ ಪತ್ರಕರ್ತ ಮತೀವುರ್ರಹ್ಮಾನ್ ಸಿದ್ದೀಕಿ ಕೇಳಿದ ಪ್ರಶ್ನೆ. ಇದು ಆತನ ಪ್ರಶ್ನೆ ಮಾತ್ರವಲ್ಲ ಎಲ್ಲ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಸಮು ದಾಯಗಳು ಕೇಳಿದ ಪ್ರಶ್ನೆಯಾಗಿದೆ. ನಮ್ಮ ಪ್ರಭುತ್ವ ಎದೆ ಮುಟ್ಟಿ ನೋಡಿಕೊಳ್ಳಬೇಕಾದ ಸವಾಲಾಗಿದೆ. ಈ ಪ್ರಶ್ನೆಗೆ ಸೂಕ್ತ ಉತ್ತರ ನೀಡಲಾಗದಿದ್ದರೆ ಪ್ರಭುತ್ವದ ಬಗ್ಗೆ ಜನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರ ಬಗ್ಗೆ ನಮ್ಮ ದೇಶದ ತನಿಖಾ ಆಯೋಗಗಳು ಪೂರ್ವಗ್ರಹ ಪೀಡಿತವಾಗಿವೆ ಎಂಬ ಸಿದ್ದೀಕಿ ಆರೋಪ ನೂರಕ್ಕೆ ನೂರರಷ್ಟು ಸತ್ಯ. ಸೂಕ್ತ ಸಾಕ್ಷಾಧಾರವಿಲ್ಲದೆ ಒಂದು ಸಮುದಾಯದ ಯುವಕರನ್ನು ಬಂಧಿಸುವುದು, ಮಾಧ್ಯಮಗಳಿಗೆ ಬಣ್ಣಬಣ್ಣದ ಕತೆಗಳನ್ನು ಬಿಡುಗಡೆ ಮಾಡುವುದು, ಮಾಧ್ಯಮಗಳು ಇನ್ನಷ್ಟು ರಂಗು ಸೇರಿಸಿ ಪ್ರಕಟಿಸುವುದು, ತಿಂಗಳಾನುಗಟ್ಟಲೆ ವಶದಲ್ಲಿಟ್ಟುಕೊಂಡು…

Read More