ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ-ಸನತ್ ಕುಮಾರ್ ಬೆಳಗಲಿ

ಜಗತ್ತಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾದ ದಾಖಲೆ ಎಂದು ಹೆಸರಾಗಿದೆ. ಸ್ವಾತಂತ್ರದ ಏಳು ದಶಕಗಳ ಕಾಲ ಈ ದೇಶವನ್ನು ಮುನ್ನಡೆಸಿದ ಈ ಸಂವಿಧಾನದ ವಿರುದ್ಧ ಈಗ ಸಂಚು ಒಳಸಂಚುಗಳು ನಡೆದಿವೆ. ಈ ಸಂವಿಧಾನ ಇಲ್ಲದಿದ್ದರೆ ರಾಮನಾಥ ಕೋವಿಂದ್ ರಾಷ್ಟ್ರಪತಿಯಾಗುತ್ತಿರಲಿಲ್ಲ, ಮೋದಿ ಪ್ರಧಾನಿಯಾಗುತ್ತಿರಲಿಲ್ಲ. ಸಂವಿಧಾನ ಬರುವ ಮುನ್ನ ಇಲ್ಲಿದ್ದ ಮನುಸ್ಮತಿಯ ಕಟ್ಟುಪಾಡುಗಳ ಪ್ರಕಾರ ಇವರೆಲ್ಲ ತಮ್ಮ ತಮ್ಮ ಜಾತಿಗಳಿಗೆ ವಿಧಿಸಿದ ಕೆಲಸ ಮಾಡಿಕೊಂಡು ಬಿದ್ದಿರಬೇಕಿತ್ತು. ಇವತ್ತು ಚಪ್ಪಲಿ ಹೊಲಿಯುವ ಮಹಿಳೆ ತನ್ನ ಮಗ ಕಲೆಕ್ಟರ್ ಸಾಹೇಬ ಆಗಬೇಕೆಂದು ಕನಸು ಕಾಣುವ ಆ ಕನಸನ್ನು ನನಸನ್ನಾಗಿ ಮಾಡುವ ಅವಕಾಶ ಕಲ್ಪಿಸಿದ್ದು ಈ ಸಂವಿಧಾನ. ಈ ಆತ್ಮಗೌರವ ಬಂದಿದ್ದು ಯಾವುದೇ ದೇವರು, ಧರ್ಮದಿಂದಲ್ಲ, ಬಾಬಾಸಾಹೇಬರು ರೂಪಿಸಿದ ಸಂವಿಧಾನದಿಂದ. ಇಂತಹ ಸಂವಿಧಾನವನ್ನು ನಾಶ ಮಾಡಲು ಹೊರಟವರು ಈಗ ಸಂವಿಧಾನದ ಮೂಲ ಕರಡು ಪ್ರತಿ ಸಿದ್ಧಪಡಿಸಿದವರು ಅಂಬೇಡ್ಕರ್ ಅಲ್ಲ ಬಿ.ಎನ್.ರಾವ್ ಎಂಬ…

Read More