ದೇಶ ಸುಡುವ ಈ ಬೆಂಕಿ ನಂದಿಸಲು ಒಂದಾಗೋಣ

ಭಾರತ ಮನುವಾದಿ ಫ್ಯಾಸಿಸ್ಟ್ ಬೆಂಕಿಯ ದವಡೆಗೆ ಸಿಲುಕಿದೆ. ಹಾದಿ, ಬೀದಿಗಳಲ್ಲಿ ಧರ್ಮದ ಹೆಸರಿನಲ್ಲಿ ಮನುಷ್ಯರನ್ನು ಹೊಡೆದು ಕೊಲ್ಲುವ ಪೈಶಾಚಿಕ ಕೃತ್ಯಗಳು ನಡೆಯುತ್ತಿವೆ. ಈ ಕೊಲೆಗಡುಕತನವನ್ನು ಸಮರ್ಥಿಸುವ ಸಮೂಹ ಸನ್ನಿ ಸಾಮಾಜಿಕ ಜೀವನವನ್ನು ತಲ್ಲಣಗೊಳಿಸಿದೆ. ಇಂಥ ಅಪಾಯಕಾರಿ ಸನ್ನಿವೇಶದಲ್ಲಿ ಇನ್ಫೋಸಿಸ್‌ನ ನಾರಾಯಣಮೂರ್ತಿ ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ . ಅವರ ಮಾತುಗಳ ಬಗ್ಗೆ ಈಗ ಸಂದೇಹ ಪಡುವುದು ಬೇಡ. ಈಗ ಪರಿಸ್ಥಿತಿ ಕೈ ಮೀರಿ ಹೋಗಿದೆ. ಜನಾಂಗ ದ್ವೇಷದ ವಿಷ ಇಡೀ ಸಾಮಾಜಿಕ ಬದುಕನ್ನು ಆವರಿಸುತ್ತಿದೆ. ಜೈ ಶ್ರೀ ರಾಮ ಹೇಳು ಎಂದು ನಡು ರಸ್ತೆಯಲ್ಲಿ ಬಡಿದು ಸಾಯಿಸಲಾಗುತ್ತಿದೆ. ಇದರ ವಿರುದ್ಧ ಧ್ವನಿಯೆತ್ತುವ ಬುದ್ಧಿಜೀವಿಗಳ, ಸಾಹಿತಿಗಳ ಮತ್ತು ಚಿಂತಕರ ಗತಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ನರೇಂದ್ರ ದಾಬೋಳ್ಕರ, ಗೋವಿಂದ ಪಾನ್ಸರೆ, ಡಾ,ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಮನೆ ಬಾಗಿಲಿಗೆ ಬಂದು ಗುಂಡಿಕ್ಕಿ ಸಾಯಿಸಿದರು. ಕೆಲ ಜನಪರ…

Read More