ಕಾಲಾ ಎಂಬ ದೇಶದ ನೈಜ ಕಲಾಕೃತಿ…

-ರಾಹುಲ ಬೆಳಗಲಿ ಕಲಾಕೃತಿಗೆ ಯಾವತ್ತೂ ಇಂಥದ್ದೇ ಚೌಕಟ್ಟು ಎಂಬುದು ಇರುವುದಿಲ್ಲ. ಕ್ಯಾನ್ವಾಸ್ ಮೇಲೆ ಬಗೆಬಗೆಯ ರೇಖೆಗಳು ಮತ್ತು ಬಣ್ಣಗಳು ಮಿಳಿತಗೊಂಡು ಸಿದ್ಧವಾಗುವ ಕಲಾಕೃತಿ ಅಂತಿಮ ಸ್ವರೂಪ ಪಡೆದ ಮರುಕ್ಷಣವೇ ಅದು ಕಲಾವಿದನ ಕಲ್ಪನೆಯಿಂದ ಬಿಡುಗಡೆಯಾಗುತ್ತದೆ. ಕಲಾವಿದನಿಗೆ ಕಲಾಕೃತಿ ಒಂದೇ ತೆರನಾಗಿ ಗೋಚರಿಸಿದರೆ, ಕಲಾಸಕ್ತರಿಗೆ ಅದು ಹಲವು ಅರ್ಥಗಳಲ್ಲಿ ಕಾಣಿಸುತ್ತದೆ. ಹಿರಿಯ ನಟ ರಜನಿಕಾಂತ್ ಅಭಿನಯದ “ಕಾಲಾ” ಚಿತ್ರ ಕೂಡ ಅಂಥದ್ದೇ ಒಂದು ಕಲಾಕೃತಿ! ಭಾರತದ ಹಲವು ಬಣ್ಣಗಳನ್ನು ಪರಿಚಯಿಸುವ “ಕಾಲಾ” ಚಿತ್ರವು ಎರಡೂವರೆ ಗಂಟೆಯ ಅವಧಿಯಲ್ಲಿ ಒಂದೊಂದು ಬಣ್ಣದ ಸಂಕೇತ ಮತ್ತು ಸಂಗತಿಗಳನ್ನು ಅತ್ಯಂತ ಸೂಕ್ಷ್ಮವಾಗಿ ತಿಳಿಸುತ್ತದೆ. ಬಿಳಿ ಬಣ್ಣದೊಳಗಿನ ಅಹಂಕಾರ-ಕಪ್ಪು ಬಣ್ಣದೊಳಗಿನ ಸ್ವಾಭಿಮಾನ. ಬಿಳಿ ಮೈಯೊಳಗಿನ ಉನ್ನತ ಶಿಕ್ಷಣದ ದರ್ಪ-ಕಪ್ಪು ಮೈಯೊಳಗಿನ ಅನಕ್ಷರತೆ ಅಂಧಕಾರ. ಕಪ್ಪನೆಯ ಚುಕ್ಕಿ ಕಂಡರೂ ಅಸಹ್ಯಪಡುವಷ್ಟು ಬಿಳಿ-ಅಪಮಾನ ನುಂಗಿಕೊಂಡೇ ಬದುಕುವ ಕಪ್ಪು. ಹುಟ್ಟಿರುವುದೇ ಆಳ್ವಿಕೆ ನಡೆಸಲು ಎಂಬುದು ಬಿಳಿ ಬಣ್ಣದ ಸವರ್ಾಧಿಕಾರ-ಒಂದೇ…

Read More